Choose Language:

Kamalahmed Malekoppa

  • Group:art exhibition

Kamalahmed Malekoppa

ಕಮಲ್ ಅಹಮದ್ ಮಾಳೆಕೊಪ್ಪ 

ಕಮಲ್ ಅಹಮದ್ ಮಾಳೆಕೊಪ್ಪ ಗದಗ ಮೂಲದ ಮಿನಿಯೇಚರ್ ಕಲಾವಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರವೃತ್ತಿದಿಂದ ಕಲಾ ಶಿಕ್ಷಕರು ಮತ್ತು ಚಿತ್ರ ಕಲಾವಿದರು. ಅವರ ಬಹುತೇಕ ಮಿನಿಯೇಚರ್ ಆರ್ಟ್ ಗಳು ವಾಸ್ತವದ ಸೂಕ್ಷ್ಮ ಸ್ಪರ್ಶಗಳೊಂದಿಗೆ ರೂಪುಗೊಂಡಿವೆ.

ಕಮಲ್ ಅಹಮದ್ ಅವರಿಗೆ ಗುಲ್ಬರ್ಗದ ಮಿನಿ ವಿಧಾನಸೌಧದಲ್ಲಿ ನಡೆದ ವಾರ್ಷಿಕ ವಸ್ತುಪ್ರದರ್ಶನದಲ್ಲಿ ಚಿನ್ನದ ಪದಕ, ಗದಗದ ಕೆ.ವಿ.ಪರಿಷತ್‌ನಿಂದ ಪ್ರತಿಭಾ ರತ್ನ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಅತ್ಯುತ್ತಮ ಸಾಂಪ್ರದಾಯಿಕ ಚಿತ್ರಕಲಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo