Choose Language:

Home

Watch Videos

Mantapa

Play Video

Mathana

Play Video

Angala

Play Video

Pustaka

Play Video

ಬುಕ್ ಬ್ರಹ್ಮ ಸಾಹಿತ್ಯ ಉತ್ಸವ

ಎರಡೂವರೆ ಸಾವಿರ ವರ್ಷಗಳ ಶ್ರೀಮಂತ ಸಾಹಿತ್ಯ ಪರಂಪರೆ ಹೊಂದಿರುವ ದಕ್ಷಿಣ ಭಾರತದ ಭಾಷೆಗಳ (ತಮಿಳು, ಕನ್ನಡ, ಮಲಯಾಳಂ, ತೆಲುಗು)  ನಡುವಿನ ಪರಸ್ಪರ ಸಂಬಂಧವು ಐತಿಹಾಸಿಕ ಮಹತ್ವದ್ದಾಗಿದೆ. ಈ ಸಂಬಂಧವನ್ನು ಸಂಭ್ರಮಿಸಲಿಕ್ಕಾಗಿ ಬುಕ್ ಬ್ರಹ್ಮ ಸಾಹಿತ್ಯ ಉತ್ಸವ ಆಯೋಜಿಸಲಾಗಿದೆ. 

 ಭಾರತದಲ್ಲಿ ಒಟ್ಟು ಏಳು ನೂರಕ್ಕೂ ಹೆಚ್ಚು ಮಾತನಾಡುವ ಭಾಷೆಗಳಿವೆ. ಆ ಪೈಕಿ ದಕ್ಷಿಣ ಭಾರತದ ಸಾಹಿತ್ಯವು ’ಸಿಲಪ್ಪದಿಗಾರಂ’, ’ಆದಿಪುರಾಣ’, ’ರಾಮಚರಿತಂ’, ’ಆಂಧ್ರ ಮಹಾಭಾರತಂ’ತಿರುನಿಝಲ್ಮಲಾ’ ಕಾವ್ಯಗಳ ಮೂಲಕ ಶ್ರೀಮಂತ ಪರಂಪರೆಗೆ ನಾಂದಿ ಹಾಡಿತು. ಹಾಗೆಯೇ ಹಲವಾರು ಆಧುನಿಕ ಕೃತಿಗಳು ಕೂಡ ಆಯಾ ಭಾಷೆಯ ಶ್ರೀಮಂತಿಕೆ ಹೆಚ್ಚಿಸಲು ಕಾರಣವಾಗಿವೆ. ೫೮ ಜನ ಜ್ಞಾನಪೀಠ ಪುರಸ್ಕೃತರ ಪೈಕಿ ಈ ಪ್ರದೇಶದ ೧೯ ಜನ ಕವಿ-ಲೇಖಕರಿದ್ದಾರೆ. ದಕ್ಷಿಣ ಭಾರತದ ಸಾಹಿತ್ಯಾಸಕ್ತರು ಮತ್ತು ಲೇಖಕರು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ ನಡೆಯಲಿದೆ. ಇದರಲ್ಲಿ ಪ್ರಕಾಶಕರು, ಓದುಗರು, ಲೇಖಕರು ಮತ್ತು ಪುಸ್ತಕ ಮಾರಾಟಗಾರರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. 

 

Writer
ಜಗತ್ತಿನ 450ಕ್ಕೂ ಅಧಿಕ ಬರಹಗಾರರು
0
panelist
220 ಕ್ಕೂ ಹೆಚ್ಚು
ವಿಷಯ ತಜ್ಞರು
0
publisher
5 ರಾಜ್ಯಗಳಿಂದ 100 ಕ್ಕೂ ಹೆಚ್ಚು ಪ್ರಕಾಶಕರು
0
artist
5 ರಾಜ್ಯಗಳಿಂದ 120ಕ್ಕೂ ಹೆಚ್ಚು ಕಲಾವಿದರು
0
books
ವಿವಿಧ ಭಾಷೆಗಳ 60ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು
0

Speakers/Performers

 Partners

Platinum Partner

Gold Partners

Silver Partners

Associate Partners

Session Partners

Print Media Partners

Radio Partner

Digital Media Partner

Publishers/Book Houses

Institutional Partners 

Knowledge Partner

Event Partner

Venue Partner

ಬುಕ್ ಬ್ರಹ್ಮ

ಬೆಂಗಳೂರು ಮೂಲದ ಬುಕ್ ಬ್ರಹ್ಮ ಒಂದು ಡಿಜಿಟಲ್ ಮಾಧ್ಯಮ ಸಂಸ್ಥೆಯಾಗಿದೆ. ಸಾಹಿತ್ಯ  ಮತ್ತು ಸಂಸ್ಕೃತಿಯಲ್ಲಿ ಆಸಕ್ತರಾಗಿರುವ ಎಲ್ಲರನ್ನೂ ಒಳಗೊಳ್ಳುವ ಉದ್ದೇಶದಿಂದ ೨೦೧೯ರಲ್ಲಿ ಬುಕ್ ಬ್ರಹ್ಮ ಆರಂಭಿಸಲಾಯಿತು.  ಲೇಖಕರು, ಪ್ರಕಾಶಕರು, ವಿತರಕರು, ಓದುಗರು ಮತ್ತು ವಿಮರ್ಶಕರ ನಡುವಿನ ಸಂಬಂಧ ಬೆಸೆಯುವ ವೇದಿಕೆಯಾಗಿದೆ. ಕಳೆದ ಐದು ವರ್ಷದ ಅವಧಿಯಲ್ಲಿ, 40ಕ್ಕೂ ಹೆಚ್ಚು ದೇಶಗಳ 165 ದಶಲಕ್ಷಕ್ಕೂ ಹೆಚ್ಚು ಸಾಹಿತ್ಯಾಸಕ್ತರನ್ನು ತಲುಪಲು ಸಾಧ್ಯವಾಗಿದೆ. 

ಆನ್‌ಲೈನ್ ಕಾರ್ಯಕ್ರಮಗಳು, ಸಂದರ್ಶನಗಳು ಮತ್ತು ಸಮಾರಂಭಗಳ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ವಿಭಿನ್ನ ಛಾಪು ಮೂಡಿಸಲಾಗಿದೆ. ಇದುವರೆಗೆ 6000 ಕ್ಕೂ ಹೆಚ್ಚು ಕನ್ನಡ ಲೇಖಕರ, 20,000 ಕ್ಕೂ ಹೆಚ್ಚು ಪುಸ್ತಕಗಳ ಪರಿಚಯವನ್ನು ನೀಡಲಾಗಿದೆ. ಮುಂದೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷಾಸಾಹಿತ್ಯದ ಮೇಲೂ ಕೆಲಸ ವಿಸ್ತರಿಸುವ ಯೋಚನೆ ಇದೆ. ಇನ್ನು 2022 ರಲ್ಲಿ, ಬುಕ್ ಬ್ರಹ್ಮವು ವಿಶ್ವಾದ್ಯಂತ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಹೊರತಾಗಿ ಕನ್ನಡದ ಅತಿದೊಡ್ಡ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ ಮತ್ತು ಕಾದಂಬರಿ ಪುರಸ್ಕಾರವನ್ನು ಪ್ರಾರಂಭಿಸಿತು. 

ಕಾರ್ಯಕ್ರಮದ ವೇಳಾಪಟ್ಟಿ

ಬುಕ್ ಬ್ರಹ್ಮ ಸಾಹಿತ್ಯ ಉತ್ಸವ-2024 ರಲ್ಲಿ ಏನೇನಿರುತ್ತೆ?

ಇಲ್ಲಿದೆ ಪೂರ್ಣ ಮಾಹಿತಿ

ಸಂಭ್ರಮದ ಸಾಹಿತ್ಯ ಉತ್ಸವದಲ್ಲಿ ಜೊತೆಯಾಗಲು ಸಿದ್ದರಾಗಿ!

ಸ್ಥಳ

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ