Choose Language:

Ganesh Doddamani

  • Group:art exhibition

Ganesh Doddamani

ಗಣೇಶ ಪಿ. ದೊಡ್ಡಮನಿ

ಚಿತ್ರಕಲಾವಿದ ಗಣೇಶ ಪಿ. ದೊಡ್ಡಮನಿ ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಗುಲ್ಬರ್ಗದ M.M.K ಕಾಲೇಜ್ ಆಫ್ ವಿಷುಯಲ್ ಆರ್ಟ್‌ನಲ್ಲಿ B.F.A ಮತ್ತು ಪಶ್ಚಿಮ ಬಂಗಾಳದ ಶಾಂತಿನಿಕೇತನದ ಕಲಾ ಭವನದಿಂದ M.V.A ಪದವಿ ಪಡೆದಿದ್ದಾರೆ.

ಗಣೇಶ ಅವರು ಗುರು ಶಂಕರ್‌ ಪಾಟೀಲ್‌ ಅವರ ಮಾರ್ಗದರ್ಶನದಲ್ಲಿ ಕುಂಚದ ಜಗತ್ತಿನಲ್ಲಿ ಪಯಣ ಆರಂಭಿಸಿದರು. ತಮ್ಮದೇ ಆದ ಬಣ್ಣ ವೈವಿಧ್ಯವನ್ನು ರೂಢಿಸಿಕೊಂಡಿರುವ ಅವರು, ಕ್ಯಾನ್ವಾಸ್‌ನಲ್ಲಿ ಭಾರತೀಯ ಪರಂಪರೆಯ ಸಾಂಪ್ರದಾಯಿಕ ಶೈಲಿಯಲ್ಲಿ ತಮ್ಮ ಸೃಜನಶೀಲತೆಯನ್ನು ಅಭಿವ್ಯಕ್ತಗೊಳಿಸುತ್ತಾರೆ. ಅವರ ಕಲಾ ಸೇವೆಗೆ ವರ್ಣಕಲಾ ಸಂಸ್ಕೃತಿ ಸಂಘ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರ, ಹಂಪಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo