Choose Language:

Arunank Latha

  • Group:publishers conclave

Arunank Latha

ಅರುಣಾಂಕ್ ಲತಾ ವೃತ್ತಿಯಲ್ಲಿ ವಕೀಲರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ‘ಛಾಯಾ’ ಎಂಬ ತೆಲುಗು ಪ್ರಕಾಶನದ ಸಂಪಾದಕರಾಗಿ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ. ಎರಡು ಕವನ ಸಂಕಲನ ಮತ್ತು ಪತ್ರ ಸಾಹಿತ್ಯ ಪ್ರಕಟಿಸಿದ್ದು ಅದು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇಯಲ್ಲದೆ ಮೂರು ಕಾದಂಬರಿಗಳನ್ನು ಸಂಪಾದಿಸಿದ್ದಾರೆ ಮತ್ತು ಚಲನಚಿತ್ರಗಳಿಗೆ ಚಿತ್ರಕಥೆ ರಚನಕಾರರಾಗಿಯೂ ಗುರುತಿಸಿಕೊಂಡಿದ್ದಾರೆ.

ಸಾಹಿತ್ಯಿಕ ಪ್ರಯತ್ನಗಳ ಜೊತೆಗೆ, ಅರುಣಾಂಕ್ ಅವರು ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಕುರಿತು ತಮ್ಮ ಆಲೋಚನೆಗಳನ್ನು ಮುಖ್ಯವಾಹಿನಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಲೇಖನಗಳ ಮೂಲಕ ಹಂಚಿಕೊಳ್ಳುತ್ತಾರೆ. ಅವರ ಬರಹಗಳು ಪ್ರಮುಖ ತೆಲುಗು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಭಾಷಾಂತರ ಮತ್ತು ಸಂಶೋಧನಾ ಲೇಖನಗಳ ಬರವಣಿಗೆಯೂ ಇವರ ಆಸಕ್ತಿಯಲ್ಲಿ ಸೇರಿಕೊಂಡಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo