Choose Language:

ANIL IJERI

  • Group:art exhibition

ANIL IJERI

ಅನಿಲ್ ಇಜೇರಿ 

ಅನಿಲ್ ಇಜೇರಿ ಅವರು ತಮ್ಮ ವಿಭಿನ್ನ ಶೈಲಿಯ ಚಿತ್ರಕಲೆಯ ಮೂಲಕ ಗುರುತಿಸಿಕೊಂಡವರು. ಮಧ್ಯಪ್ರದೇಶದ ಭೋಪಾಲ್ ನಿವಾಸಿಯಾಗಿರುವ ಅವರು ಪ್ರಿಂಟ್ ಮೇಕರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಬಿ.ಎಫ್.ಎ ಪದವಿ ಹಾಗೂ ಗುಲ್ಬರ್ಗಾದ ಎಂ.ಎಂ.ಕೆ ಚಿತ್ರಕಲಾ ಶಾಲೆಯಿಂದ ಎಂ.ವಿ.ಎ ಪದವಿ ಗಳಿಸಿದ್ದಾರೆ.

ಅವರಿಗೆ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ರಾಜ್ಯ ಪ್ರಶಸ್ತಿ(2016), ಏ.ಐ.ಎಫ್.ಸಿ.ಎಸ್ ಪ್ರಶಸ್ತಿ, ನವದೆಹಲಿ(2010), ಶೆಣೈ ಆರ್ಟ್ ಫೌಂಡೇಶನ್ ಉದಯೋನ್ಮುಖ ಕಲಾವಿದ ಪ್ರಶಸ್ತಿ(2019) ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo