Choose Language:

Jayant Kaikini

ಜಯಂತ ಕಾಯ್ಕಿಣಿ  

ಕವಿ-ಕತೆಗಾರ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರು. ಮುಂಬೈನ ಫಾರ್ಮಾ ಕಂಪೆನಿಯಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದ ಜಯಂತ ಅವರು ನಂತರಭಾವನಾಪತ್ರಿಕೆಯ ಸಂಪಾದಕರಾಗಿದ್ದರು. ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕಾರ್ಯ ನಿರ್ವಹಿಸಿದ ಅನುಭವ ಇರುವ ಅವರು ಮನಮುಟ್ಟುವ ಗೀತೆಗಳನ್ನು ರಚಿಸಿದ್ದಾರೆ. ಅವು ಕನ್ನಡದ ಸಿನಿಮಾಗಳಲ್ಲಿ ಸೂಪರ್ಹಿಟ್ಆಗಿವೆ. ನಾಟಕಗಳನ್ನು ಅನುವಾದಿಸಿರುವ ಅವರು ಅಂಕಣಕಾರರೂ ಹೌದು. ’ತೆರೆದಷ್ಟೇ ಬಾಗಿಲು’,ದಗಡೂ ಪರಬನ ಅಶ್ವಮೇಧ’, ಅಮೃತಬಳ್ಳಿ ಕಷಾಯ’,ತೂಫಾನ್ಮೇಲ್‌’ ಕಥಾ ಸಂಕಲನಗಳು.  ರಂಗದಿಂದೊಂದಷ್ಟು ದೂರ’,ಕೋಟಿತೀರ್ಥ’,ಶ್ರಾವಣ ಮಧ್ಯಾಹ್ನ’,ನೀಲಿ ಮಳೆಕವನ ಸಂಕಲನಗಳು. ಅವರ ಅನುವಾದಿತ ಸಣ್ಣಕತೆಗಳನೋ ಪ್ರೆಸೆಂಟ್ಪ್ಲೀಸ್‌’ ಸಂಕಲನಕ್ಕೆ ದಕ್ಷಿಣ ಏಷ್ಯಾದ ಪ್ರತಿಷ್ಠಿತಡಿಎಸ್‌ಸಿ ಸಾಹಿತ್ಯ ಪ್ರಶಸ್ತಿಸಂದಿದೆ. ನಾಲ್ಕು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಅವರಿಗೆ ಕುಸುಮಾಗ್ರಜ, ಪ್ರಶಸ್ತಿ, ರಾಷ್ಟ್ರೀಯ ಕಥಾ ಪ್ರಶಸ್ತಿಗಳೂ ಸಂದಿವೆ. 

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo