Choose Language:

Volga

ವೋಲ್ಗಾ (ಪಿ. ಲಲಿತಾ ಕುಮಾರಿ) 

‘ವೋಲ್ಗಾ’ ಕಾವ್ಯನಾಮದಿಂದ ಜನಪ್ರಿಯರಾದ ತೆಲುಗಿನ ಪ್ರಮುಖ ಲೇಖಕರಲ್ಲಿ ಪಿ. ಲಲಿತಾ ಕುಮಾರಿ ಅವರು ಒಬ್ಬರು. ಬರಹಗಾರ್ತಿಯ ಜೊತೆಗೆ, ಅವರು ಟಾಲಿವುಡ್‌ನಲ್ಲಿ ಉಷಾಕಿರಣ್ ಮೂವೀಸ್‌’ನ  ಸ್ಕ್ರಿಪ್ಟಿಂಗ್ ವಿಭಾಗದ ಮುಖ್ಯಸ್ಥರು ಹಾಗು ಪ್ರೊಫೆಸರ್ ಆಗಿದ್ದಾರೆ.ತಮ್ಮ ಬಹುತೇಕ ಬರಹಗಳು ಸ್ತ್ರೀಸಂವೇದನೆಯ ಪರವಾಗಿದ್ದು, ಸ್ತ್ರೀವಾದದ ಕಲ್ಪನೆಯನ್ನು ಒಪ್ಪಿಕೊಳ್ಳದ ಕಾಲದಲ್ಲಿ ಇವರ ಚಿ೦ತನೆಗಳು ದೇಶಾದ್ಯಂತ ಚರ್ಚೆಗಳನ್ನು ಹುಟ್ಟಿಸಿತ್ತು.20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ‘ವೋಲ್ಗಾ’ ಅವರಿಗೆ ನಂದಿ ಪ್ರಶಸ್ತಿ (ಅತ್ಯುತ್ತಮ ಕಥಾ ಲೇಖಕ), ಸುಶೀಲಾ ನಾರಾಯಣ ರೆಡ್ಡಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. 

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo