ವಿಕ್ರಮ ವಿಸಾಜಿ
ಕವಿ, ವಿಮರ್ಶಕ ವಿಕ್ರಮ ವಿಸಾಜಿ ಅವರು ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು. ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ತಮಾಷಾ, ಗೂಡು ಕಟ್ಟುವ ಚಿತ್ರ, ವಿಕ್ರಮ ವಿಸಾಜಿ ಕಥೆಗಳು, ಬಿಸಿಲ ಕಾಡಿನ ಹಣ್ಣು (ಕವನ ಸಂಗ್ರಹಗಳು) ಬೆಳಗಿನ ಮುಖ, ನಾದಗಳು ನುಡಿಯಾಗಲೇ, ಪಠ್ಯದ ಭವಾವಳಿ (ವಿಮರ್ಶೆ) ರಸಗಂಗಾಧರ, ರಕ್ತ ವಿಮಾಪ (ನಾಟಕ) ಕಂಬಾರರ ನಾಟಕಗಳು, ಮತ್ತೆ ಬಂತು ಶ್ರಾವಣ (ಸಂಪಾದನೆ) ಗ್ರೀಕ್ ಹೊಸ ಕಾವ್ಯ, ಇಂದ್ರಸಭಾ, ಸಿಮೊನ್ ದ ಬೋವಾ (ಅನುವಾದ) ಇವರ ಪ್ರಕಟಿತ ಕೃತಿಗಳು.