Choose Language:

Veeranna Madivalar

ಸೃಜನಶೀಲ ಲೇಖಕ, ಶಿಕ್ಷಕ ವೀರಣ್ಣ ಮಡಿವಾಳರ ತಮ್ಮ ಮೊದಲ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ಕವಿ. ಇದು ಕನ್ನಡಕ್ಕೆ ಬಂದ ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಹ ಆಗಿತ್ತು. ಬರವಣಿಗೆಯ ಜೊತೆಗೆ ಚಿತ್ರ ಮತ್ತು ಛಾಯಾಚಿತ್ರಗಳಲ್ಲಿಯೂ ಆಸಕ್ತಿ ಬೆಳೆಸಿಕೊಂಡಿರುವ ವೀರಣ್ಣ 2013 ರಲ್ಲಿ ‘ಸಾಂಗ್ಸ್ ಆಫ್ ಸೈಲೆನ್ಸ್’ ಎಂಬ ಛಾಯಾಚಿತ್ರ ಪ್ರದರ್ಶನ ನಡೆಸಿದ್ದಾರೆ. ‘ನೆಲದ ಕರುಣೆಯ ದನಿ’, ‘ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ’ ವೀರಣ್ಣ ಮಡಿವಾಳರ ಖಂಡ ಕಾವ್ಯ, ‘ನಾಗರ ನುಂಗಿದ ನವಿಲು’ ಅವರ ಮುಖ್ಯ ಕೃತಿಗಳು.
ಸಾಹಿತ್ಯ ಕ್ಷೇತ್ರ ಮತ್ತು ಶೈಕ್ಷಣಿಕ ಕ್ಷೇತ್ರಗಳೆರಡರಲ್ಲಿಯೂ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತಿರುವ ವೀರಣ್ಣ ಅವರಿಗೆ ಕೇಂದ್ರ ಸಾಹಿತ್ಯ ಅಡಾಡೆಮಿಯ ಯುವ ಪುರಸ್ಕಾರ ಸೇರಿದಂತೆ ಬೇಂದ್ರೆ ಗ್ರಂಥ ಬಹುಮಾನ, ಇಂಚಲ ಕಾವ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಲಭಿಸಿವೆ. ವೀರಣ್ಣರ ಅವರ ಕವಿತೆಗಳು ಇತರ ಭಾಷೆಗಳಿಗೆ ಅನುವಾದಗೊಂಡಿವೆ ಅಲ್ಲದೇ ಪಠ್ಯದಲ್ಲೂ ಸೇರಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo