ವಡ್ರೇವು ಚಿನ್ನವೀರಭದ್ರುಡು
ಐಎಎಸ್ ಅಧಿಕಾರಿಯಾಗಿ ನಿವೃತ್ತರಾಗಿರುವ ವಡ್ರೇವು ಚಿನ್ನವೀಭದ್ರುಡು ಅವರು ತೆಲುಗಿನ ಅತ್ಯಂತ ಪ್ರಮುಖ ಕವಿ, ಕಥೆಗಾರ, ಭಾಷಾಂತರಕಾರ ಮತ್ತು ವಿಮರ್ಶಕ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಇವರು ರಚಿಸಿರುವ 30ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಕೋಕಿಲ ಪ್ರವೇಶಿಂಚೆ ಕಲಾಂ, ನೀತಿರಂಗುಲ ಚಿತ್ರಂ, ಪ್ರಶ್ನ ಭೂಮಿ, ನೇನು ತಿರುಗಿನ ದಾರುಲು ಇವರ ಪ್ರಮುಖ ಕೃತಿಗಳು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ’ಇಗ್ನೈಟೆಡ್ ಮೈಂಡ್ಸ್’ ಕೃತಿಯನ್ನು ಇವರು ತೆಲುಗಿಗೆ ಅನುವಾದಿಸಿದ್ದು, ಅದಕ್ಕಾಗಿ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಪುರಸ್ಕಾರ ಪಡೆದಿದ್ದಾರೆ. ಬಸವಣ್ಣನ ವಚನಗಳನ್ನು ತೆಲುಗಿಗೆ ಅನುವಾದಿಸುವ ಮಹತ್ಕಾರ್ಯದಲ್ಲಿ ಇವರು ತೊಡಗಿದ್ದಾರೆ.