Choose Language:

Ugama Srinivas

ಪತ್ರಕರ್ತ, ಲೇಖಕ, ರಂಗಕರ್ಮಿ ಉಗಮ ಶ್ರೀನಿವಾಸ್ ಕಳೆದ 30 ವರ್ಷಗಳಿಂದ ಪತ್ರಿಕೋದ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. 25 ವರ್ಷಗಳಿಂದ ಕನ್ನಡಪ್ರಭದಲ್ಲಿ ತುಮಕೂರು ಜಿಲ್ಲಾ ವರದಿಗಾರರಾಗಿರುವ ಅವರು ಸಾಹಿತ್ಯ, ರಂಗಭೂಮಿ, ಸಂಘಟನೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

‘ಬಯಲ ಬಾಗಿಲು’, ‘ಒಂದು ಬಟ್ಟೆ ಚೂರು’, ‘ಅವಳ‌ ಜೋಗಿ’ (ಕವನಸಂಕಲನ), ‘ಅಮೆರಿಕನ್ ಗೊಂಬೆ’ (ಕಥಾ ಸಂಕಲನ), ‘ಮಳೆ ಕಾವು’ (ಸಂಸ್ಕೃತಿ ಕುರಿತ ಪುಸ್ತ)ಕ,‌ ‘ಬೀದಿ’ (ಸಂಪಾದಿತ ಕೃತಿ), ಸ್ವಾತಂತ್ರ್ಯ ಹೋರಾಟಗಾರ್ತಿ ಪೊನ್ನಮ್ಮಾಳ್ ಬಗ್ಗೆ ಬೆಂಗಳೂರು ವಿವಿಗೆ ಪುಸ್ತಕ ರಚನೆ ಸೇರಿದಂತೆ ಈವರೆಗೆ ಏಳು ಕೃತಿಗಳನ್ನು ಪ್ರಕಟಿಸಿದ್ದಾರೆ.

ರಂಗಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಉಗಮ ಶ್ರೀನಿವಾಸ ಅವರು ತುಮಕೂರಿನಲ್ಲಿ ಝೆನ್ ಟೀಮ್ ರಂಗ ಸಂಸ್ಥೆ ಸ್ಥಾಪಿಸಿ ಈವರೆಗೆ 100ಕ್ಕೂ ಹೆಚ್ಚು ಪ್ರಯೋಗಾತ್ಮಕ ನಾಟಕಗಳನ್ನು ಆಯೋಜಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ನಾಟಕ ಶಾಲೆ, ನೀನಾಸಂ, ರಂಗಾಯಣ, ಸಾಣೆಹಳ್ಳಿ ಶಿವಸಂಚಾರ ಮುಂತಾದ ರೆಪರ್ಟರಿಗಳ ನಾಟಕಗಳನ್ನು ತುಮಕೂರಿನಲ್ಲಿ ಆಯೋಜಿಸಿರುವ ಅವರು ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿದ್ದಾರೆ. ಈ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತುಮಕೂರು ‌ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾಗಿದ್ದ ಉಗಮ ಶ್ರೀನಿವಾಸ್ ರಾಷ್ಟ್ರೀಯ ಪತ್ರಕರ್ತರ ಸಂಘದ ಸದಸ್ಯರೂ ಆಗಿದ್ದಾರೆ.

ಪತ್ರಿಕೋದ್ಯಮ ಮತ್ತು ಸಾಹಿತ್ಯಿಕ ಸೇವೆಗಾಗಿ ಎರಡು ಬಾರಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಒಂದು ಬಾರಿ ಕರ್ನಾಟಕ ನಾಟಕ ಅಕಾಡೆಮಿ‌ ಪ್ರಶಸ್ತಿ, ವಾರ್ತಾ ಇಲಾಖೆಯ ಪ್ರತಿಷ್ಠಿತ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo