Choose Language:

Tiger Ashok Kumar

ಬಿ.ಬಿ ಅಶೋಕ್ ಕುಮಾರ್ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತರು. ಮೂಲತಃ ಕೊಡಗಿನ ಪರಾಣೆ ಗ್ರಾಮದವರಾದ ಅಶೋಕ್ 1977ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗೆ ಸೇರಿದರು. ಕಾಡುಗಳ್ಳ ವೀರಪ್ಪನ್ ಕೇಸಿನಲ್ಲಿ ಮುಖ್ಯ ಅಧಿಕಾರಿಗಳಲ್ಲಿ ಒಬ್ಬರಾಗಿದ್ದ ಅಶೋಕ್, ಕರ್ನಾಟಕ ಪೊಲೀಸರ ವಿಶೇಷ ಕಾರ್ಯಪಡೆಯ ಭಾಗವಾಗಿ ವೀರಪ್ಪನ್ ನ 13ಸಹಚರರನ್ನು ಕೊಂದಿದ್ದಾರೆ ಎಂದು ವರದಿಯಾಗಿದೆ. ಅವರು 31 ಜುಲೈ 2012 ರಂದು ಸೇವೆಯಿಂದ ನಿವೃತ್ತರಾದರು ಇಂದಿಗೂ ತಮ್ಮ ವೃತ್ತಿ ಬದುಕಿನ ಹಳೆಯ ದ್ವೇಷದಿಂದಾಗಿ ಕ್ರಿಮಿನಲ್ ಭೂಗತ ಪ್ರಪಂಚದಿಂದ ನಿರಂತರ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ವೃತ್ತಿಯಲ್ಲಿನ ತಮ್ಮ ನಿಷ್ಠೆ ಕರ್ತವ್ಯ ಪ್ರಜ್ಞೆಗಾಗಿ ಮೂರು ಬಾರಿ ಭಾರತದ ರಾಷ್ಟ್ರಪತಿಗಳ ಚಿನ್ನದ ಪದಕ ಮತ್ತು ಒಂದು ಕರ್ನಾಟಕದ ಮುಖ್ಯಮಂತ್ರಿಯ ಚಿನ್ನದ ಪದಕವನ್ನು ಪಡೆದಿದ್ದಾರೆ. ಅಲ್ಲದೇ ಅಶೋಕ್‌ಗೆ 1984 ರಲ್ಲಿ ಗೃಹ ಸಚಿವರಿಂದ ‘ಟೈಗರ್’ ಬಿರುದನ್ನು ನೀಡಲಾಗಿದೆ. ಇವರ ವೃತ್ತಿ ಬದುಕಿನ ಅನುಭವ ಕಥನಗಳು ಡೆಡ್ಲಿಸೋಮಾ, ಸರ್ಕಲ್ ಇನ್ಸ್ ಪೆಕ್ಟರ್, ಮೈನಾ ಸೇರಿದಂತೆ ಹಲವು ಚಲನಚಿತ್ರಗಳಾಗಿ ಖ್ಯಾತಿ ಗಳಿಸಿದೆ. ಅಲ್ಲದೇ ‘ಹುಲಿಯ ನೆನಪುಗಳು’, ‘ಬುಲೆಟ್ ಸವಾರಿ’ ಎಂಬ ಎರಡು ಕೃತಿಗಳನ್ನು ರಚಿಸಿದ್ದಾರೆ. 

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo