Choose Language:

R Tarini Shubhadayini

ತಾರಿಣಿ ಶುಭದಾಯಿನಿ

ಕನ್ನಡದ ಅತ್ಯಂತ ಸೂಕ್ಷ್ಮ ವಿಮರ್ಶಕಿ, ಲೇಖಕಿಯಾಗಿರುವ ತಾರಿಣಿ ಶುಭದಾಯಿನಿ ಅವರು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದ್ದಾರೆ. ‘ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ’ ಎಂಬ ಕವನ ಸಂಕಲನ ಹೊರ ತಂದಿರುವ ಅವರು ಉಪನ್ಯಾಸಕಿಯಾಗಿದ್ದು, ಕನ್ನಡ ಸಾಹಿತ್ಯದ ಬಗ್ಗೆ ಹಲವಾರು ಉಪನ್ಯಾಸ ನೀಡಿದ್ದಾರೆ. ‘ಹೆಡೆಯಂತಾಡುವ ಸೊಡರು’ ಅವರ ವಿಮರ್ಶಾ ಕೃತಿ.

ಸ್ತ್ರೀಶಿಕ್ಷಣ ಚರಿತ್ರೆಯ ಹೆಜ್ಜೆಗಳು ಅವರ ಮಾನವಿಕ ಕೃತಿಯಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಪ್ರೊ. ಡಿ.ಸಿ. ಅನಂತಸ್ವಾಮಿ ಸಂಸ್ಕರಣ ದತ್ತಿನಿಧಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಸ್ತ್ರೀವಾದಕ್ಕೆ ಹೊಸ ಆಯಾಮದ ಅರ್ಥ ನೀಡಿದವರಲ್ಲಿ ಒಬ್ಬರಾಗಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo