Choose Language:

T G Srinidhi

ಟಿ.ಜಿ. ಶ್ರೀನಿಧಿ
ವಿಜ್ಞಾನ-ತಂತ್ರಜ್ಞಾನದ ಕುರಿತು ಬರೆಯುವ ಲೇಖಕ, ಅಂಕಣಕಾರ ಟಿ.ಜಿ. ಶ್ರೀನಿಧಿ ಅವರು ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ಕನ್ನಡ ಜಾಲ ತಾಣ ‘ಇಜ್ಞಾನ ಡಾಟ್ ಕಾಮ್’ (www.ejnana.Com) ನ ರೂವಾರಿಯು ಹೌದು. ಸದ್ಯ ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಹಿರಿಯ ಪ್ರೋಗ್ರಾಮರ್ ಅನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿಧಿ ನಾಲ್ಕು ನೂರಕ್ಕೂ ಹೆಚ್ಚು ಲೇಖನಗಳು ಹಾಗೂ ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಪ್ರಸ್ತುತ ಉದಯವಾಣಿಯಲ್ಲಿ ಅವರ ‘ವಿಜ್ಞಾಪನೆ’ ಅಂಕಣ ಪ್ರಕಟವಾಗುತ್ತಿದೆ. ಈ ಹಿಂದೆ ವಿಜಯ ಕರ್ನಾಟಕ, ಉಷಾಕಿರಣ ಹಾಗೂ ಸೂರ್ಯೋದಯ ಪತ್ರಿಕೆಗಳಿಗೆ ಅಂಕಣಕಾರರೂ ಆಗಿದ್ದರು. ‘ಶ್ರೀನಿಧಿಯ ಪ್ರಪಂಚದಲ್ಲಿ (www.srinidhi.net.in) ಬ್ಲಾಗಿಸುವುದು, ಛಾಯಾಗ್ರಹಣ, ಪ್ರವಾಸ ಹಾಗೂ ಪುಸ್ತಕಗಳ ಓದು ಇವರ ಹವ್ಯಾಸಗಳು.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo