Choose Language:

Santhosh Echikkanam

ಚಿತ್ರಕಥೆಗಾರ ಸಂತೋಷ್ ಏಚಿಕಾನಂ (Santhosh Aechikkanam) ಅವರು ಕೇರಳದ ಪ್ರಮುಖ ಸಿನಿಮಾ ಬರಹಗಾರರಲ್ಲಿ ಒಬ್ಬರು. ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಅದ್ಬುತ ಬರಹಗಳ ಮೂಲಕ ಗುರುತಿಸಿಕೊಂಡವರು. ಕೋಮಲ ಮತ್ತು ಬಿರಿಯಾನಿ ಅವರ ಹಿಟ್ ಕಿರುಚಿತ್ರಗಳು. ಫಹಾದ್ ಫಾಸಿಲ್ ಅಭಿನಯದ ಅನ್ನಯುಮ್ ರಸೂಲುಮ್ ( Annayum Rasoolum), ಬ್ಯಾಚುಲರ್ ಪಾರ್ಟಿಯಂತಹ ಅನೇಕ ಹಿಟ್ ಚಿತ್ರದ ಚಿತ್ರಕಥೆಗಾರರು ಹೌದು.
“ಕೋಮಲ” ಸಣ್ಣ ಕಥೆ ಚಿತ್ರಕ್ಕೆ 2008ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಪ್ರಭ ಸಾಹಿತ್ಯ ಪ್ರಶಸ್ತಿ, ಕರೂರ್ ಪ್ರಶಸ್ತಿ, ಪ್ರವಾಸಿ ಬಶೀರ್ ಪ್ರಶಸ್ತಿ, ಅಬುಧಾಬಿ ಶಕ್ತಿ ಪ್ರಶಸ್ತಿ, ಚೆರುಕಾಡ್ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo