Choose Language:

Sabiha Bhoomigowda

ಕತೆ, ಕವಿತೆ, ಅಂಕಣ, ಪ್ರಬಂಧ, ವಿಮರ್ಶೆ, ಸಂಶೋಧನೆ ಸೇರಿದಂತೆ ಸಾಹಿತ್ಯದ ಹತ್ತು ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಪ್ರೊ.ಸಬಿಹಾ ಭೂಮಿಗೌಡ ಅಧ್ಯಾಪನ ಮತ್ತು ಆಡಳಿತದ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿದವರು.
ಅಧ್ಯಾಪಕಿಯಾಗಿ, ಸಂಶೋಧಕಿಯಾಗಿ, ಲೇಖಕಿಯಾಗಿ, ಜನಪರ ಚಳವಳಿಗಳ ಒಡನಾಡಿಯಾಗಿ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ, ಸಾಹಿತ್ಯ ಅಕಾಡೆಮಿಯ ಸದಸ್ಯೆ, ಕರಾವಳಿ ಲೇಖಕಿಯರ ಸಂಘದ ಅಧ್ಯಕ್ಷೆ, ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಸೇರಿದಂತೆ ಅಧಿಕಾರದ ಹಲವು ಸ್ಥಾನಗಳನ್ನು ನಿಷ್ಪಕ್ಷಪಾತ ಪಾರದರ್ಶಕ ಆಡಳಿತ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಮೂಲಕ ದಕ್ಷತೆಯಿಂದ ನಿಭಾಯಿಸಿದವರು. ಇವರ ಸೃಜನಶೀಲ ಮತ್ತು ಸೃಜನೇತರ ಬರವಣಿಗೆಗಳಲ್ಲಿ ಸ್ಪಷ್ಟ ಚಿಂತನೆ ಹಾಗೂ ಸ್ತ್ರೀವಾದಿ ಛಾಪನ್ನು ಕಾಣಬಹುದು.
ಬಗೆ, ಚಿತ್ತಾರ, ಕನ್ನಡ ಭಾಷಾ ಪ್ರವೇಶ, ನಿಲುಮೆ, ನುಡಿಗವಳ, ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ, ಲೀಲಾ ಬಾಯಿ ಕಾಮತ್ ಬದುಕು ಬರೆಹ, ಒಂದಾಣೆ ಮಾಲೆಯ ಸಾಹಸಿ: ಕುಟ್ಟಿ ವಾಸುದೇವ ಶೆಣೈ, ಸರಸ್ವತಿಬಾಯಿ ರಾಜವಾಡೆ ಅವರ ಆಯ್ದ ಕತೆಗಳು, ನಾವು ಮತ್ತು ನಮ್ಮ ಪರಿಸರ ಹೀಗೇ 20ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo