ಲೇಖಕಿ ಡಾ. ರೇಖಾ ವಸಂತ ಮೂಲತಃ ಕೊಡಗಿನವರು. ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಗೋಣಿಕೊಪ್ಪಲಿನ ಕಾವೇರಿ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಸಂಶೋಧನೆಯಲ್ಲಿ ಆಸಕ್ತಿ ಇರುವ ಇವರು ‘ಆಧುನಿಕ ಕೊಡವ ಸಾಹಿತ್ಯ’, ‘ಅರಿಕಟ್ಟು’, ‘ಕಾಳಿದಾಸ ಸಂಶೋಧನ ಕೃತಿ’, ‘ಕೊಡವ ರಂಗಭೂಮಿ’, ‘ಕೊಡವರ ಕುಲಾಚಾರಾದಿ ತತ್ಕಜೀವಿ’, ‘ಅಂಕು’ ಇವರ ಕೃತಿಗಳಾಗಿವೆ.
ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಕೊಡಗಿನ ಪ್ರಮುಖ ಲೇಖಕಿ, ಕೊಡಗಿನ ಗೌರಮ್ಮ ನಿಧಿ, ಹಾಗೂ ಕೊಡಗು-ರಂಗಾಯಣ ಬಹುಮಾನಗಳು ಒಲಿದುಬಂದಿವೆ.