ಪತ್ರಕರ್ತ, ಲೇಖಕ ರೇಮಂಡ್ ಡಿಕೂನಾ ತಾಕೊಡೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಬಳಿಯ ತಾಕೋಡೆಯವರು.
ಕೃಷಿಕ ಕುಟುಂಬದಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಕಲಿತು, ಮೂಡುಬಿದಿರೆಯ ಜೈನ ಕಾಲೇಜಿನಲ್ಲಿ ಪ್ರೌಢ ಹಾಗೂ ಪಿಯುಸಿ ಮುಗಿಸಿ ಮಂಗಳೂರಿನಲ್ಲಿ ಬಿಎ, ಎಲ್. ಎಲ್. ಬಿ. ಹಾಗೂ ಪತ್ರಿಕೋದ್ಯಮ ಉನ್ನತ ವ್ಯಾಸಂಗವನ್ನು ಮೈಸೂರು ಮಹಾವಿದ್ಯಾಲಯದಿದಂದ ಪೂರ್ಣಗೊಳಿಸಿದ್ದಾರೆ.
1985ರಿಂದ ಪತ್ರಕರ್ತರಾಗಿ, 39 ವರುಷಗಳಿಂದ ಕನ್ನಡ, ಕೊಂಕಣಿ, ತುಳು, ಇಂಗ್ಲಿಷ್ ಬಾಷೆಗಳಲ್ಲಿ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದ್ಯ ಪೂರ್ಣ ಕಾಲಿಕ ಪತ್ರಕರ್ತರಾಗಿದ್ದು ಪಿಂಗಾರ.ಕೊಮ್, ಪಿಂಗಾರ ಯುಟ್ಯೂಬ್ ಚಾನೆಲ್, ಪಿಂಗಾರ ಟ್ವಿಟರ್ ನೀಫ್ಟ್ ಮತ್ತು ಪಿಂಗಾರ ಕನ್ನಡ ಸುದ್ದಿ ಪತ್ರಿಕೆಯ ಸಂಪಾದಕರಾಗಿದ್ದಾರೆ.
ಪ್ರಸ್ತುತ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇದರ ಕಾರ್ಯದರ್ಶಿ (2021-2025)ಯಾಗಿರುವ ಇವರು ಪ್ರೆಸ್ ಕ್ಲಬ್ ಮೂಡಬಿದ್ರಿ ತಾಲೂಕು ಇದರ ಸ್ಥಾಪಕ ಅಧ್ಯಕ್ಷರು ಹಾಗೂ ಅಖಿಲ ಭಾರತೀಯ ಚಾರೊಳಿ ಕೊಂಕಣಿ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ.