ಕಲಾವಿದ, ಹವ್ಯಾಸಿ ಬರಹಗಾರ ರವಿಕುಮಾರ ಕಾಶಿ ಅವರು ಮೂಲತಃ ಬೆಂಗಳೂರಿನವರು. ಬೆಂಗಳೂರಿನ ಕಾಲೇಜ್ ಆಫ್ ಫೈನ್ ಆರ್ಟ್‌ನಿಂದ ಪದವಿ ಹಾಗೂ ಬರೋಡಾದ ಫೈನ್ ಆರ್ಟ್ಸ್ ಫ್ಯಾಕಲ್ಟಿ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿತ್ರ, ಶಿಲ್ಪ, ಛಾಯಾಗ್ರಹಣ ಮತ್ತು ಇನ್‌ಸ್ಟಾಲೇಷನ್ ಕ್ಷೇತ್ರದಲ್ಲಿ ಕಲಾಕೃತಿ ರಚಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಜೊತೆಜೊತೆಗೆ ದೃಶ್ಯಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡುತ್ತಾರೆ. ಇವರ ‘ಕಣ್ನೆಲೆ’ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ವಿವಿಧ ದೇಶಗಳಲ್ಲಿ ದೃಶ್ಯಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಕನ್ನಡ ಮಾತ್ರವಲ್ಲದೆ ಇಂಗ್ಲಿಷ್ ಭಾಷೆಯಲ್ಲಿಯೂ ಕೃತಿ ರಚಿಸಿದ್ದಾರೆ. ಇವರ ‘ಸೇನಾ ಪರ್ವ’ ಕೃತಿಯು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಪ್ರಕಟಗೊಂಡಿದೆ.