Choose Language:

Ranjani Raghavan

ನಟಿ, ನಿರ್ದೇಶಕಿ ಸೃಜನಶೀಲ ಬರಹಗಾರ್ತಿಯೂ ಆಗಿರುವ ರಂಜನಿ ರಾಘವನ್ ಅವರು ರೂಪಾಂತರಾ ಅಮೇಚರ್ ಥಿಯೇಟರ್ ತಂಡದ ನಿರ್ದೇಶನದ ಮತ್ತು ನಿರ್ಮಾಣದ ಅನೇಕ ನಾಟಕಗಳಲ್ಲಿಯೂ ನಟಿಸಿದ್ದಾರೆ.
ಪೌರಾಣಿಕ ಧಾರಾವಾಹಿ ಕೆಳದಿ ಚೆನಮ್ಮದಲ್ಲಿ ನಾಗವೇಣಿ ಎಂಬ ಸಣ್ಣ ಪಾತ್ರದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಆಕಾಶದೀಪ ಧಾರಾವಾಹಿಯಲ್ಲಿ ನಟಿಸಿದರು. ನಂತರ ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು. ಅವರಿಗೆ ಸಣ್ಣ ಪರದೆಯಲ್ಲಿ ದೊಡ್ಡ ಹೆಸರು ಮತ್ತು ಯಶಸ್ಸನ್ನು ನೀಡಿತು. ನಂತರ ಇಷ್ಟದೇವತೆ ಧಾರಾವಾಹಿಗೆ ಸೃಜನಶೀಲ ನಿರ್ದೇಶಕರಾಗಿ ಕೆಲಸ ಮಾಡಿದರು ಮತ್ತು ಮಲಯಾಳಂ ಧಾರಾವಾಹಿ ‘ಪೌರ್ಣಮಿ ತಿಂಕಲ್‌’ನಲ್ಲಿ ನಟಿಸಿದರು. ‘ಕನ್ನಡತಿ’ ಧಾರಾವಾಹಿಯಲ್ಲಿ ಭುವನೇಶ್ವರಿಯಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದ ರಾಜಹಂಸ ಚಿತ್ರದಲ್ಲೂ ಅವರು ನಟಿಸಿದ್ದಾರೆ . 2018 ರಲ್ಲಿ ಅವರು IFM ಫ್ಯಾಷನ್ ಶೋನಿಂದ ಮಿಸ್ ಇಂಡಿಯಾ ಸೂಪರ್ ಮಾಡೆಲ್ ಅನ್ನು ಗೆದ್ದಿದ್ದ ರಂಜನಿ 2022 ರಲ್ಲಿ, ಅವರು ರೋಟರಿಕ್ಲಬ್ ಬೆಂಗಳೂರಿನ ಯೂತ್ ಐಕಾನ್ ಪ್ರಶಸ್ತಿ ಮತ್ತು ಚಿತ್ತಾರ ರೈಸಿಂಗ್ ಸ್ಟಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ನಟನೆ ನಿರ್ದೇಶನದ ಜೊತೆಗೆ ಸೃಜನಶೀಲ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿರುವ ಅವರು ‘ಕತೆಡಬ್ಬಿ’, ‘ಸ್ಟೈಪ್ ರೈಟ್’ ಕೃತಿಗಳನ್ನು ಪ್ರಕಟಿಸಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo