ರಮೇಶ್ ಕಾರ್ತಿಕ್ ನಾಯಕ್
ರಮೇಶ್ ಕಾರ್ತಿಕ್ ನಾಯಕ್ ತೆಲುಗು ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಪ್ರಭುತ್ವ ಹೊಂದಿರುವ ತೆಲುಗು ಭಾಷೆಯ ಹೊಸ ಪೀಳಿಗೆಯ ಸಾಹಿತ್ಯ ಪ್ರತಿಭೆ. ಇವರು ತೆಲಂಗಾಣದವರು. ತೆಲುಗಿನಲ್ಲಿ ಇವರ ’ಬಾಲ್ದೆರ್ ಬಂಡಿ’, ’ಧಾವ್ಲೊ’ ಮತ್ತು ’ಕೆಸುಲಾ’ ಕಥಾ ಸಂಕಲನಗಳು ಪ್ರಕಟವಾಗಿವೆ. ’ಚಕ್ಮಕ್’ ಇವರ ಇಂಗ್ಲಿಷ್ ಕೃತಿ. ಬಂಜಾರ ಜನಾಂಗದ ಜೀವನಶೈಲಿಯನ್ನು ಕಥಾ ಸಾಹಿತ್ಯದಲ್ಲಿ ಪ್ರತಿನಿಧಿಸಿದ ಪ್ರಮುಖ ಲೇಖಕ ಇವರು. ಇವರು ಕವಿ ಕೂಡ ಆಗಿದ್ದು, ಹಲವಾರು ಕವಿತೆಗಳು ಅಂತರ್ ರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿವೆ ಮತ್ತು ಹಿಂದಿ, ಮಲೆಯಾಳಂ, ಕನ್ನಡ, ಬೆಂಗಾಲಿ ಮತ್ತಿತರ ಭಾರತೀಯ ಭಾಷೆಗಳಿಗೆ ಭಾಷಾಂತರಗೊಂಡು ಪ್ರಕಟವಾಗಿವೆ. ಕಲಾಹಂಸ ಕವಿತ ಪುರಸ್ಕಾರ, ಬುಡಕಟ್ಟು ಜನಾಂಗದ ಯುವ ಸಾಧಕ ಪ್ರಶಸ್ತಿ, ಬಂಜಾರ ಯುವ ಸಾಧಕ, ರವಿ ಶಾಸ್ತ್ರಿ ಕಥಾ ಪುರಸ್ಕಾರ ಪಡೆದ ಯುವ ಲೇಖಕ ಇವರು. ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿನ ಪದವಿ ಮತ್ತು ಸ್ನಾತಕೋತ್ತರ ಪಠ್ಯಗಳಲ್ಲಿ ಇವರ ಕವನಗಳು ಪಠ್ಯವಾಗಿವೆ.