Choose Language:

Purushothama Bilimale

ಜಾನಪದ, ಸಾಂಸ್ಕೃತಿಕ ಅಧ್ಯಯನ, ಯಕ್ಷಗಾನ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ಲೇಖಕ, ಚಿಂತಕ ಡಾ. ಪುರುಷೋತ್ತಮ ಬಿಳಿಮಲೆ ಅವರು ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಬಂಡಾಯ-ದಲಿತ’ ಸಾಹಿತ್ಯ ಚಳುವಳಿಯಲ್ಲಿ, ಜನಪರ ಹೋರಾಟಗಳನ್ನು ಸಂಘಟಿಸಿರುವ ಬಿಳಿಮಲೆ ಅವರು ತಮ್ಮ ಬರವಣಿಗೆಗಳಲ್ಲಿ ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ಧ್ವನಿಯಾಗಿದ್ದಾರೆ.

‘ದಲಿತ ಜಗತ್ತು’, ‘ಶಿಷ್ಟ ಪರಿಶಿಷ್ಟ’, ‘ಕರಾವಳಿ ಜಾನಪದ’, ‘ಕೂಡುಕಟ್ಟು’, ‘ಬಹುರೂಪ’, ‘ಕೊಡಗು ಮತ್ತು ದ. ಕನ್ನಡ ಜಿಲ್ಲಾ ದರ್ಶನ’, ಸೇರಿದಂತೆ 24ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಸೇರಿ ಹಲವು ಗೌರವಗಳು ಸಂದಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo