ಪ್ರಕಾಶ್ ಕಂಬತ್ತಳ್ಳಿ
ಅಂಕಿತ ಪುಸ್ತಕ ಸಂಸ್ಥೆಯ ಮಾಲೀಕರಾದ ಪ್ರಕಾಶ್ ಕಂಬತ್ತಳ್ಳಿ ಅವರು ರಂಗಭೂಮಿಯ ಕಡೆ ಒಲವುಹೊಂದಿದ್ದು, ನಾಟಕಶಾಸ್ತ್ರದಲ್ಲಿ ಬಿ. ಎ ಹಾಗೂ ಕನ್ನಡದಲ್ಲಿ ಎಂ. ಎ ಪದವಿ ಪಡೆದಿದ್ದಾರೆ. ಕಥೆಗಾರರು, ಅನುವಾದಕರಾ ಆಗಿರುವ ಅವರು ವಿವಿಧ ಸಂಸ್ಥೆಗಳಲ್ಲಿ ಸಂಪಾದಕರಾಗಿ ದುಡಿದಿದ್ದಾರೆ. 1995ರಲ್ಲಿ ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಕಥೆಗಾರರಿಗೆ ಮತ್ತು ಪ್ರೇಕ್ಷಕರಿಗೆ ಪ್ರೋತ್ಸಾಹಿಸುತ್ತಿರುವ ಅವರು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿದ್ದರು. ಕೆಲ ಕಾಲ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ.
‘ಅನ್ವೇಷಕರು ಮತ್ತು ಇತರ ನಾಟಕಗಳು’, ‘ಕಂಪ್ಯೂಟರ್ ಸೇವಕ ಮತ್ತು ಇತರ ನಾಟಕಗಳು’, ‘ಮಕ್ಕಳಿಗಾಗಿ ಮತ್ತೆ ಹೇಳಿದ ನಸಿರುದ್ದೀನನ ಕತೆಗಳು’ ಇವರ ಪ್ರಕಟಿತ ಕೃತಿಗಳು
ವಿಚಾರ ಸಂಸ್ಥೆಯ 2019ನೇ ಸಾಲಿನ ‘ಪುಸ್ತಕ ಸಂಸ್ಕೃತಿ, ರಾಜ್ಯ ಮಟ್ಟದ ಕಣ್ವ ವರ್ಷದ ಪ್ರಕಾಶಕ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.