ಸಣ್ಣ ಕಥೆಗಾರ ಮತ್ತು ಕಾದಂಬರಿಕಾರ ಪಾಲ್ ಜಕಾರಿಯಾ ಅವರು ಮಲಯಾಳಂನ ಪ್ರಮುಖ ಲೇಖಕರಲ್ಲಿ ಒಬ್ಬರು. ಅವರು 17 ಸಣ್ಣ ಕಥಾ ಸಂಕಲನಗಳನ್ನು ಪ್ರಕಟಿಸಿದ್ದು,’ಕುನ್ನು (Kunnu in 1969) ಅವರ ಮೊದಲ ಸಣ್ಣ ಕಥಾಸಂಕಲನ. 7 ಕಾದಂಬರಿ , 6 ಪ್ರವಾಸಿ ಕಥನ ಜೊತೆಗೆ ಪ್ರಬಂಧ ಬರಹಗಾರರಾಗಿ, ಮಕ್ಕಳ ಪುಸ್ತಕ ಬರಹಗಾರರಾಗಿ, ಅನುವಾದಕರಾಗಿ ಮತ್ತು ಸ್ಕ್ರೀನ್ ಪ್ಲೇ ಬರಹಗಾರರಾಗಿ ಅವರು ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ನೂರಾರು ಇಂಗ್ಲಿಷ್ ಬರಹಗಳು ಭಾರತದ ಬಹುತೇಕ ಎಲ್ಲಾ ಪ್ರಮುಖ ಪ್ರಕಟಣೆಗಳಲ್ಲಿ ಕಾಣಿಸಿಕೊಂಡಿವೆ.
ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (AIMA), ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI), ಇಂಡಿಯಾ ಟುಡೇ (ಮಲಯಾಳಂ) ಮತ್ತು ಏಷ್ಯಾನೆಟ್ ಜೊತೆ ಕೆಲಸ ಮಾಡಿದ್ದಾರೆ. ಅವರಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ’ , ‘ಕೇರಳ ಸಾಹಿತ್ಯ ಅಕಾಡೆಮಿ’ ಪುರಸ್ಕಾರ ಮತ್ತು ಕೇರಳ ಸರ್ಕಾರದ ಅತ್ಯುನ್ನತ ಸಾಹಿತ್ಯ ಗೌರವವಾದ ‘ಎಝುತಾಚನ್ ಪುರಸ್ಕಾರಂ'(Ezhuthachan Puraskaram) ಸಂದಿವೆ.