Choose Language:

P S Kumar

ಪ. ಸ. ಕುಮಾರ್ ಬಲಗೈ ಹಾಗೂ ಎಡಗೈ ಎರಡರಲ್ಲೂ ರೇಖಾಚಿತ್ರಗಳನ್ನು ಬರೆಯುವ ವಾಡಿಕೆಯುಳ್ಳ ಕಲಾವಿದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ ಪದವಿ. ಕೆನ್ ಸ್ಕೂಲ್ ಆಫ್ ಆರ್ಟ್ ನಿಂದ GD art diploma in painting ಪದವಿಯನ್ನು ಪಡೆದಿದ್ದಾರೆ.

ಜೆಹಾಂಗೀರ್ ಆರ್ಟ್ ಗ್ಯಾಲರಿ, ಮುಂಬೈ, ಕರ್ನಾಟಕ ಕಲಾಯಾತ್ರ, ಕರ್ನಾಟಕ ಕಲಾಮೇಳ, ಲಕ್ಷಣ ಆರ್ಟ್ ಗ್ಯಾಲರಿ ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವೆಡೆ ಚಿತ್ರಕಲಾ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ಲಲಿತ ಕಲಾ ಅಕಾಡೆಮಿ ಆಯೋಜಿಸಿದ್ದ Painting Camp at Davanagere, G.S Shenoy Camp ಮತ್ತು K. k hebbar camp ಸೇರಿದಂತೆ ಹಲವು ವರ್ಣಚಿತ್ರ ಕ್ಯಾಂಪ್ ಗಳಲ್ಲಿ ಭಾಗವಹಿಸಿದ್ದಾರೆ.

ಪ್ರಜಾಮತ ನಿಯತಕಾಲಿಕೆಯಲ್ಲಿ ಹಲವು ವರ್ಷಗಳ ಕಲಾ ರೇಖಾಚಿತ್ರ ಕಲಾವಿದರಾಗಿ, ಕನ್ನಡ ಪ್ರಭಾ ದಿನಪತ್ರಿಕೆಯಲ್ಲಿ 2 ವರ್ಷಗಳ ಕಲಾ chief artist ಆಗಿ ಕೆಲಸ ಮಾಡಿದ್ದಾರೆ. ಈವರೆಗೆ ಒಂದು ಸಾವಿರಕ್ಕೂ ಅಧಿಕ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳಿಗೆ ರೇಖಾಚಿತ್ರಗಳನ್ನು ನೀಡಿದ್ದಾರೆ.

ಸಾಹಿತ್ಯದ ಓದು ಬರವಣಿಗೆಯಲ್ಲೂ ವಿಶೇಷ ಆಸಕ್ತಿ ಹೊಂದಿರುವ ಅವರ 5 ಸಣ್ಣ ಕಥೆ ಮತ್ತು 5 ಕವನಸಂಕಲನವನ್ನು ರಚಿಸಿದ್ದಾರೆ. ಅವರಿಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ಆರ್ಟ್ ಫೌಂಡೇಶನ್ ನಿಂದ ಕಲಾಧ್ಯಾನ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೀರಂ ನಾಗರಾಜ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಸಂದಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo