ಓಂ ಶಿವಪ್ರಕಾಶ್ ಎಚ್ ಎಲ್
ಓಂ ಶಿವಪ್ರಕಾಶ್ ಎಚ್ ಎಲ್ ಅವರು ಡಿಜಿಟಲ್ ಆರ್ಕೈವಿಸ್ಟ್ ಮತ್ತು ವಾಣಿಜ್ಯೋದ್ಯಮಿಯಾಗಿದ್ದು, ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ, ವಚನ ಸಾಹಿತ್ಯದ ಡಿಜಿಟಲೀಕರಣ, ಕನ್ನಡ ಪುಸ್ತಕಗಳ ಡಿಜಿಟಲೀಕರಣ, ರಂಗ ಗೀತೆಗಳು, ನಾಟಕಗಳನ್ನು ಡಿಜಿಟಲ್ ಫ್ಲಾಟ್‌ಫಾಮ್‌ರ್‍ಗೆ ತರುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.
ಅವರು #ServantsOfKnowledge ನ ಸಹ-ಸಂಸ್ಥಾಪಕರಾಗಿದ್ದಾರೆ, ಇದು ಭಾರತದಾದ್ಯಂತ ವಿವಿಧ ಪುಸ್ತಕಗಳು, ಹಸ್ತಪ್ರತಿಗಳು ಮತ್ತು ನಿಯತಕಾಲಿಕೆಗಳನ್ನು ಡಿಜಿಟಲೈಸ್ ಮಾಡಲು ಮತ್ತು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ, ರಾಷ್ಟ್ರದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.
ಓಂ ಶಿವಪ್ರಕಾಶ್ ಅವರು ತಂತ್ರಜ್ಞಾನದ ಮೂಲಕ ಕನ್ನಡ ಸಾಹಿತ್ಯ ಸಂಶೋಧನೆಯನ್ನು ಹೆಚ್ಚಿಸುವ ಸಲುವಾಗಿ ಸಂಚಯ (https://sanchaya.org), ಮತ್ತು ಕನ್ನಡ ಕಲೆ, ಇತಿಹಾಸ, ಸಂಸ್ಕೃತಿಯನ್ನು ಡಿಜಿಟಲ್‌ನಲ್ಲಿ ದಾಖಲಿಸುವ ಸಲುವಾಗಿ ಸಾಂಚಿ ಫೌಂಡೇಶನ್ (https://sanchifoundation.org) ಅನ್ನು ಸ್ಥಾಪಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ವಚನ ಸಂಚಯ, ದಾಸ ಸಂಚಯ, ಸರ್ವಜ್ಞ ಸಂಚಯ, ರನ್ನ ಸಂಚಯ, ಜನ್ನ ಸಂಚಯ ಎಂಬ ಭಾಷಾ ಸಂಶೋಧನಾ ಸೀರೀಸ್‌ಗಳಿವೆ.