Choose Language:

Nagesh Hegade

ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತ ನಾಗೇಶ ಹೆಗಡೆ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದ್ದು, ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದ್ದಾರೆ. ಜೊತೆಗೆ ದೆಹಲಿಯ ಪ್ರತಿಷ್ಠಿತ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದ್ದಾರೆ.

ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದ ಅವರು ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖಕರಿಗೆ ಪ್ರಜಾವಾಣಿ ಸುಧಾ ಪತ್ರಿಕೆಗಳಲ್ಲಿ ಅವಕಾಶ ನೀಡಿ ಪ್ರೋತ್ಸಾಹ ನೀಡಿದ್ದಾರೆ. ಅಕ್ಷರ ಪ್ರಕಾಶನ ಪ್ರಕಟಿಸಿದ ಇವರ ‘ಇರುವುದೊಂದೇ ಭೂಮಿ’ ಪುಸ್ತಕ ಕನ್ನಡದಲ್ಲಿ ಪರಿಸರ, ವಿಜ್ಞಾನದ ಬಗ್ಗೆ ಮೂಡಿ ಬಂದ ಮಹತ್ವದ ಕೃತಿಗಳಲ್ಲೊಂದು.

‘ಗಗನ ಸಖಿಯರ ಸೆರಗ ಹಿಡಿದು’, ‘ನಮ್ಮೊಳಗಿನ ಬ್ರಹ್ಮಾಂಡ’, ‘ಕೆರೆಯಲಿ ಚಿನ್ನ ಕೆರೆಯೇ ಚಿನ್ನ’, ‘ಗುಳಿಗೆ ಗುಮ್ಮ’(ಮಕ್ಕಳ ನಾಟಕ), ‘ಗುರುಗ್ರಹದಲ್ಲಿ ದೀಪಾವಳಿ’, ‘ಕ್ಯಾಪ್ಸೋಲಗಿತ್ತಿ’, ‘ಮಿನುಗುವ ಮೀನು’, ‘ಕುಲಾಂತರಿ ಕೋತಿ’, ‘ಅಂತರಿಕ್ಷದಲ್ಲಿ ಮಹಾಸಾಗರ’, ‘ಮಂಗಳನಲ್ಲಿ ಜೀವಲೋಕ’ ಸೇರಿದಂತೆ ಪರಿಸರ, ವಿಜ್ಞಾನಗಳಿಗೆ ಸಂಬಂಧಿಸಿದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ಸಾಧನೆಗೆ ಮಾಧ್ಯಮ ಅಕಾಡೆಮಿಯ ಜೀವಮಾನ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿಜ್ಞಾನ ಅಕಾಡೆಮಿ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಸಂದಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo