ನಾಗರಾಜ ವಸ್ತಾರೆ ಅಂತಲೇ ಖ್ಯಾತರಾಗಿರುವ ನಾಗರಾಜ ರಾಮಸ್ವಾಮಿ ವಸ್ತಾರೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಕಥೆ, ಕಾದಂಬರಿ, ಕವಿತೆ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
‘ಕಳೆಮನೆ ಕಥೆ’, ‘ಬಯಲು-ಆಲಯ’, ‘ಕಮಾನು-ಕಟ್ಟುಕತೆ’ ಹೆಸರಿನಲ್ಲಿ ಇವರ ಅಂಕಣಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಸ್ತಾರೆ ಅವರ ಪ್ರಮುಖ ಕೃತಿಗಳೆಂದರೆ ‘ತೊಂಬತ್ತನೇ ಡಿಗ್ರಿ’, ‘ಅರ್ಬನ್ ಪ್ಯಾಂಥರ್‍ಸ್’, ‘ನಿರವಯವ’, ಪ್ರಿಯೆ ಚಾರುಶೀಲೆ ಮುಂತಾದವು.
ಇವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.