Choose Language:

Mudnakudu Chinnaswamy

ಮೂಡ್ನಾಕೂಡು ಚಿನ್ನಸ್ವಾಮಿ

ಕನ್ನಡದ ಖ್ಯಾತ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿಯವರು ಮೂರು ತಲೆಮಾರುಗಳನ್ನು ಪ್ರಭಾವಿಸಿದ ಕವಿ. ದಲಿತ ಬಂಡಾಯ ಸಾಹಿತ್ಯದೊಂದಿಗೆ ಬೆಸೆದುಕೊಂಡು ಹಲವು ಮಹತ್ವದ ಕೃತಿಗಳನ್ನು ರಚಿಸಿರುವ ಇವರು ಸಂಸ್ಕೃತಿ, ಸಮಾಜ ಸೇವೆ ಮತ್ತು ರಂಗಭೂಮಿಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಮುಖ ಆಸಕ್ತಿ ಕವಿತೆಯಾದರೂ ಕತೆ, ನಾಟಕ, ಅನುವಾದ ಸಂಪಾದನೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ದುಡಿದು ಇದುವರೆಗೆ 38ಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹೊರತಂದಿದ್ದಾರೆ.

‘ಮತ್ತೆ ಮಳೆ ಬರುವ ಮುನ್ನ’, ‘ನಾನೊಂದು ಮರವಾಗಿದ್ದರೆ’, ‘ಚಪ್ಪಲಿ ಮತ್ತು ನಾನು’, ‘ಬುದ್ಧ ಬೆಳದಿಂಗಳು’ ಪ್ರಮುಖ ಕವಿತಾ ಸಂಕಲನಗಳು. ‘ಮೋಹದ ದೀಪ’, ‘ಪಾಪಪ್ರಜ್ಞೆ’, ಕಥೆಗಳು. ‘ಕೆಂಡ ಮಂಡಲ’, ‘ಬಹುರೂಪಿ’ – ನಾಟಕಗಳು ಹಾಗೂ ವೈಚಾರಿಕ ಬರಹಗಳಾದ, ಒಂದು ಕೊಡ ಹಾಲಿನ ಸಮರ, ಅಪರಿಮಿತದ ಕತ್ತಲೆ, ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ ಇವರ ಇತರ ಪ್ರಮುಖ ಗದ್ಯ ಕೃತಿಗಳು.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo