Choose Language:

Mounesha Badigera

ಮೌನೇಶ್‌ ಬಡಿಗೇರ್‌
ರಂಗನಿರ್ದೇಶಕ ಮತ್ತು ರಂಗನಟರೂ ಆಗಿರುವ ಮೌನೇಶ್ ಬಡಿಗೇರ್ ಉತ್ತಮ ಕತೆಗಾರರೂ ಹೌದು. ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮೌನೇಶ್ ಅವರ ‘ಮಾಯಾ ಕೋಲಾಹಲ’ ಕತಾಸಂಕಲನಕ್ಕೆ 2015ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಟೊಟೊ ಪುರಸ್ಕಾರ, ಡಾ.ಯು.ಆರ್. ಅನಂತಮೂರ್ತಿ ಪುರಸ್ಕಾರ, ಬಸವರಾಜ ಕಟ್ಟಿಮನಿ ಪುರಸ್ಕಾರಗಳು ಲಭಿಸಿವೆ.
‘ವಿಶಾಂಕೇ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ’ ಹಾಗೂ ‘ಟಪಾಲುಮನಿ'(ರವೀಂದ್ರನಾಥ ಠಾಕೂರರ ಡಾಕ್‌ಘರ್‌ ನಾಟಕದ ರೂಪಾಂತರ) ಇವರ ಪ್ರಕಟಿತ ನಾಟಕಗಳು.
ನೀನಾಸಮ್ ನಿರ್ಮಿಸಿದ ‘ಕನ್ನಡ ಕಾವ್ಯ ಕನ್ನಡಿ’ಯಲ್ಲಿ ಕುವೆಂಪು ಹಾಗೂ ಚಂದ್ರಶೇಖರ ಕಂಬಾರರ ಪದ್ಯಗಳ ದೃಶ್ಯಕಾವ್ಯ ನಿರ್ದೇಶನ, ವಿವೇಕ ಶಾನಭಾಗರ ಕಥೆ ಆಧಾರಿತ ‘ನಿರ್ವಾಣ’ ಕಿರುಚಿತ್ರ, ‘ಸೂಜಿದಾರ’ 2019ರಲ್ಲಿ ರಾಜ್ಯಾದ್ಯಂತ ತೆರೆಕಂಡ ಕನ್ನಡ ಚಲನಚಿತ್ರವಾಗಿದೆ. ಇವರ ‘ಪ್ರೇಮವೆಂಬ ಅವರ್ಗೀಯ ವ್ಯಂಜನʼ ಕೃತಿಯು ಇತ್ತೀಚಿನ ಪ್ರೇಮದ ಕುರಿತಾದ ಗ-ಪದ್ಯಗಳ ಸಂಕಲನವಾಗಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo