ಮುಹಮ್ಮದ್ ಅಲಿ ಕಮ್ಮರಡಿ ಎಂದೇ ಪರಿಚಿತರಾಗಿರುವ ಬಿ. ಎ. ಮುಹಮ್ಮದ್ ಅಲಿಯವರು 1975 ರಿಂದ 2016ರವರೆಗೆ ಸುಧೀರ್ಘ 41 ವರ್ಷಗಳ ಅವಧಿ ಪಣಂಬೂರಿನ ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2016ರಲ್ಲಿ ನಿವೃತ್ತರಾದರು. ಆನಂತರ ಇವರನ್ನು ಕರ್ನಾಟಕ ರಾಜ್ಯ ಸರ್ಕಾರ 2017ರಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾಗಿ ನೇಮಿಸಿತು. ಈ ಗೌರವಾನ್ವಿತ ಹುದ್ದೆಯಲ್ಲಿ 2021ರ ವರೆಗೆ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಮತ್ತು ಬ್ಯಾರಿ ಭಾಷೆಯಲ್ಲಿ ಇವರು ಬರೆದ ಅನೇಕ ಕತೆ, ಕವನ, ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕವಿಯೂ ಆಗಿರುವ ಮುಹಮ್ಮದ್ ಅಲಿಯವರು ಅನೇಕ ಕವಿ ಗೋ಼ಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ. 2022ರಲ್ಲಿ ಪ್ರತಿಷ್ಟಿತ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಇವರಿಗೆ ಬ್ಯಾರಿ ಕವನ ಮಂಡಿಸುವ ಅವಕಾಶ ಲಭಿಸಿತ್ತು.
‘ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ’ ಹಾಗೂ ‘ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್’ ನ ಸ್ಥಾಪಕ ಸದಸ್ಯರಾಗಿರುವ ಇವರು ‘ಕರ್ನಾಟಕ ಮುಸ್ಲಿಮ್ ಲೇಖಕರ ಸಂಘದ’ ಪ್ರಧಾನ ಕಾರ್ಯದರ್ಶಿ ಹಾಗೂ ‘ಬ್ಯಾರಿವಾರ್ತೆ’ ಮಾಸಿಕ ಪತ್ರಿಕೆಯ ಸಹ ಸಂಪಾದಕರೂ ಆಗಿದ್ದಾರೆ.