Choose Language:

Mogalli Ganesh

ಕಾದಂಬರಿಕಾರ, ವೈಚಾರಿಕ ವಿಮರ್ಶಕ, ಲೇಖಕ ಮೊಗಳ್ಳಿ ಗಣೇಶ್ ಅವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಮೊಗಳ್ಳಿ ಅವರು ತಮ್ಮ ಅನುಭವವನ್ನು ವಿಶಿಷ್ಟ, ವಿನ್ಯಾಸದಲ್ಲಿ ಸೊಗಸಾದ ಕಥೆಗಳನ್ನಾಗಿ ಕಟ್ಟಿಕೊಡಬಲ್ಲ ಕತೆಗಾರ. ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದಾರೆ.
‘ಬುಗುರಿ’, ‘ಮಣ್ಣು’, ‘ಅತ್ತೆ’, ‘ಭೂಮಿ’, ‘ಕನ್ನೆಮಳೆ’, ‘ಮೊಗಳ್ಳಿ ಕಥೆಗಳು’, ‘ಒಂದು ಹಳೆಯ ಚಡ್ಡಿ’, ‘ಬತ್ತ’, ‘ತೋಪು’, ದೇವರ ದಾರಿ, ಶಂಭಾ ಭಾಷಿಕ ಸಂಶೋಧನೆ, ತಕರಾರು, ತೊಟ್ಟಿಲು, ದೇಸಿ ಕಥನ, ಅಲ್ಲಿ ಯಾರೂ ಇಲ್ಲ, ಹೊಕ್ಕುಳು, ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ, ಜಾತಿ ಮೀಮಾಂಸೆ ಅವರ ಪ್ರಮುಖ ಕೃತಿಗಳು.
ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳು ಲಭಿಸಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo