Choose Language:

Mayura Shreyams Kumar

ಮಯೂರ ಶ್ರೇಂಯಾಸ್ ಕುಮಾರ್

ದಕ್ಷಿಣ ಭಾರತದ ಅತ್ಯಂತ ಪ್ರಮುಖ ದಿನಪತ್ರಿಕೆಗಳಲ್ಲಿ ಒಂದಾದ ’ಮಾತೃಭೂಮಿ’ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿರುವ ಮಯೂರ ಶ್ರೇಯಾಂಸ ಕುಮಾರ್ ಆ ಸಂಸ್ಥೆಯ ಪುಸ್ತಕ ಪ್ರಕಾಶನ ವಿಭಾಗವಾದ ’ಮಾತೃಭೂಮಿ ಬುಕ್ಸ್’ ಮುಖ್ಯಸ್ಥರು. ಮಲಯಾಳಂ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಅತಿ ದೊಡ್ಡ ಸಂಸ್ಥೆಗಳ ಪೈಕಿ ಒಂದಾಗಿರುವ ’ಮಾತೃಭೂಮಿ ಬುಕ್ಸ್’ ದಶಕಗಳಿಂದ ಅಲ್ಲಿನ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ’ಮಾತೃಭೂಮಿ.ಕಾಂ’, ’ಕಪ್ಪಾ ಡಿಜಿಟಲ್’ ಮತ್ತು ’ಕ್ಲಬ್ ಎಫ್ ಎಂ’ ಮುಖ್ಯಸ್ಥರು ಕೂಡ ಇವರೇ.
ಕೇರಳ ಎರಡು ಪ್ರಮುಖ ಸಾಹಿತ್ಯ ಉತ್ಸವಗಳ ಪೈಕಿ ಒಂದಾದ ’ಎಂಬಿಐಎಫ್ಎಲ್’ (ಮಾತೃಭೂಮಿ ಇಂಟರ್ ನ್ಯಾಷನಲ್ ಫೆಸ್ಟಿವಲ್ ಆಫ್ ಲೆಟರ್ಸ್) ನಿರ್ದೇಶಕರಾಗಿರುವ ಮಯೂರ ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕಾಣಿಕೆ ನೀಡಿದ್ದಾರೆ. ’ಕಪ್ಪಾ ಕಲ್ಚರ್’ ಎಂಬ ಸಂಗೀತ ಮತ್ತು ಸಾಂಸ್ಕೃತಿಕ ಉತ್ಸವ ಕೂಡ ಇವರ ಕೊಡುಗೆಯೇ ಆಗಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo