Choose Language:

Manjamma Jogathi

ಮಂಜಮ್ಮ ಜೋಗತಿ ಉತ್ತರ ಕರ್ನಾಟಕದ ಜಾನಪದ ನೃತ್ಯ ರೂಪವಾದ ಜೋಗತಿ ನೃತ್ಯಗಾರ್ತಿ ಮತ್ತು ಕನ್ನಡ ರಂಗಭೂಮಿ ನಟಿ, ಗಾಯಕಿ. 2019ರಲ್ಲಿ ಅವರು ಜನಪದ ಕಲೆಗಳ ರಾಜ್ಯದ ಉನ್ನತ ಸಂಸ್ಥೆಯಾದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಟ್ರಾನ್ಸ್ ವುಮನ್ ಆಗಿದ್ದಾರೆ. ಜನವರಿ 2021 ರಲ್ಲಿ ಭಾರತ ಸರ್ಕಾರವು ಜನಪದ ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಂಜಮ್ಮ ಜೋಗತಿ ಅವರ ಆತ್ಮಕಥನ ‘ನಡುವೆ ಸುಳಿವ ಹೆಣ್ಣು’ ಕೃತಿಯನ್ನು ಲೇಖಕ ಅರುಣ್ ಜೋಳದ ಕೂಡ್ಲಿಗಿ ನಿರೂಪಿಸಿದ್ದಾರೆ. ಅವರ ಜೀವನ ಕಥೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಸೇರಿಸಲಾಗಿದೆ. 

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo