ಕವಿ ಲಕ್ಷ್ಮಣ್(ಮಾಳವಿಕಾ) ಕನಕುಂಟ್ಲಾ ಮೂಲತಃ ರಾಯಚೂರು ಜಿಲ್ಲೆಯವರು. ಬಿ.ಎ, ಬಿ.ಎಡ್, ಎಮ್. ಎಸ್.ಡಬ್ಲ್ಯೂ,ಜೊತೆಗೆ ಎಮ್. ಫಿಲ್ ಪೂರ್ಣಗೊಳಿಸಿರುವ ಅವರು ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಒಂದೆಡೆ ಎಂಬ ಸಂಸ್ಠೆಯ ಟ್ರಸ್ಟಿಯಾಗಿರುವ ಅವರು ಬರವಣಿಗೆ, ಸಮಾಜಸೇವೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
‘ಅಟೆಂಷನ್ ಪ್ಲೀಸ್’ ಕೃತಿಯ ಸಹ ಸಂಪಾದಕರಾಗಿದ್ದು, ‘ಮೈ-ಮನ’, ‘ಭರವಸೆ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ.