Choose Language:

M K Harikumar

ಎಂ.ಕೆ. ಹರಿಕುಮಾರ್ ಆಧುನಿಕ ಮಲಯಾಳಂ ಸಾಹಿತ್ಯದ ಪ್ರಮುಖ ವಿಮರ್ಶಕ, ಕವಿ ಮತ್ತು ಅಂಕಣಕಾರ. ತಮ್ಮ ವಸ್ತುನಿಷ್ಠತೆ, ವಿಶಿಷ್ಟ ಚಿಂತನೆಯ ಪ್ರಕ್ರಿಯೆ ಮತ್ತು ವಿಷಯಗಳ ಆಯ್ಕೆಗೆ ಮೂಲಕ ಗುರುತಿಸಿಕೊಂಡವರು. “ಆತ್ಮಯಂಗಲುದೇ ಖಸಕ್”(Aathmayangalude Khasak) (1984) ಅವರ ಮೊದಲ ಕೃತಿ. ಈ ಕೃತಿಯು ಹಿರಿಯ ಸಾಹಿತಿ ಓ. ವಿ. ವಿಜಯನ್ ಅವರ ಪ್ರಸಿದ್ಧ ಕಾದಂಬರಿ “ಖಾಸಕ್ಕಿಂತೆ ಇತಿಹಾಸಂ”(Khasakkinte Ithihasam)ಕುರಿತ ವಿಶ್ಲೇಷಣಾತ್ಮಕ ಅಧ್ಯಯನವಾಗಿದೆ. ಕೇರಳ ಕೌಮುದಿ (Kerala Kaumudi) ಮತ್ತು ಕಲಾಕೌಮುದಿ(Kalakaumudi) ಯಲ್ಲಿ ಪ್ರಕಟವಾಗುತ್ತಿದ್ದ ಅವರ ಅಂಕಣ ಬರಹ “ಅಕ್ಷರಜಾಲಕಂ”(Aksharajaalakam) ಬಹಳ ಜನಪ್ರಸಿದ್ಧವಾದದ್ದು. ಎಂ.ಕೆ. ಹರಿಕುಮಾರ್ ಅವರಿಗೆ 2009ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿಯ ‘ವಿಲಾಸಿನಿ ಪ್ರಶಸ್ತಿ’ಹಾಗೆಯೇ 2010 ರಲ್ಲಿ ಅಮೆರಿಕದ ಎಕ್ಸ್‌ಪ್ರೆಸ್ ಹೆರಾಲ್ಡ್ ಆನ್‌ಲೈನ್ ಪತ್ರಿಕೆಯಿಂದ ದಶಕದ ಅತ್ಯುತ್ತಮ ಮಲಯಾಳಂ ಅಂಕಣಕಾರರಾಗಿ ಅವರನ್ನು ಆಯ್ಕೆ ಮಾಡಲಾಗಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo