ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಹೆಸರಾಂತ ಹಾಸ್ಯಗಾರ, ಖ್ಯಾತ ಕನ್ನಡ ವಿದ್ವಾಂಸ, ಶಿಕ್ಷಣತಜ್ಞ ಪ್ರೊ.ಕೃಷ್ಣೇಗೌಡ ಅರು ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎಯಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪಡೆದಿದ್ದಾರೆ. ಅಧ್ಯಾಪಕರಾಗಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರ ವಾಗುವ ‘ಹರಟೆ’ ಕಾರ್ಯಕ್ರಮದ ಮೂಲಕ ಕಿರುತೆರೆ ಪ್ರವೇಶಿಸಿದ ಅವರು ಚಲನಚಿತ್ರರ ಮತ್ತು ಟೆಲಿ- ಧಾರಾವಾಹಿ ನಟರಾಗಿ, ರಂಗಭೂಮಿ ಕಲಾವಿದರಾಗಿ, ಕನ್ನಡ ಚಲನಚಿತ್ರಗಳಿಗೆ ಗೀತರಚನೆಕಾರರಾಗಿ ಜೊತೆಗೆ ಅಂಕಣಕಾರರಾಗಿಯೂ ಖ್ಯಾತಿ ಗಳಿಸಿದ್ದಾರೆ. ‘ಜಲದ ಕಣ್ಣು’ ಎಂಬ ಅವರ ಲೇಖನಗಳ ಸಂಗ್ರಹವನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ.