Choose Language:

Krishnamurthy Hanur

ಕೃಷ್ಣಮೂರ್ತಿ ಹನೂರು
ಜಾನಪದ ತಜ್ಞ, ಕತೆಗಾರ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಅವರ ‘ಅಜ್ಞಾತನೊಬ್ಬನ ಆತ್ಮ ಚರಿತ್ರೆ’ ಕಾದಂಬರಿ ಓದುಗರ ಮೆಚ್ಚುಗೆ ಪಡೆದಿದ್ದು, ಇಂಗ್ಲೀಷ್ ಗೆ ಅನುವಾದಗೊಂಡಿದೆ. ಕೇರಿಗೆ ಬಂದ ಹೋರಿ, ಕತ್ತಲಲ್ಲಿ ಕಂಡ ಮುಖ ಮತ್ತು ಕಳೆದ ಮಂಗಳವಾರ ಮುಸ್ಸಂಜೆ ಅವರ ಕಥಾಸಂಕಲನಗಳು. ಬಾರೋ ಗೀಜಗನೆ, ನಿಕ್ಷೇಪ ಅವರ ಕಾದಂಬರಿಗಳು. ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ.
ಅವರು ಸಂಪಾದಿಸಿದ ‘ವಿಶ್ವಕೋಶ ಎನ್ ಸೈಕ್ಲೋಪೀಡಿಯಾ ಆಫ್ ಫೋಕ್ ಕಲ್ಚರ್ ಆಫ್ ಕರ್ನಾಟಕ’ ಕನ್ನಡ ಜಾನಪದವನ್ನು ಇಂಗ್ಲಿಷ್ ನಲ್ಲಿ ಪರಿಚಯಿಸುತ್ತದೆ. ಇದನ್ನು ಚೆನ್ನೈನ ಇನ್ಟಿಟ್ಯೂಟ್ ಆಫ್ ಏಷ್ಯನ್ ಸ್ಟಡೀಸ್ ಪ್ರಕಟಿಸಿದೆ. ಅವರ ಪಿಎಚ್.ಡಿ ಮಹಾಪ್ರಬಂಧ ಮ್ಯಾಸ ಬೇಡರು ಬುಡಕಟ್ಟು ಅಧ್ಯಯನದ ಪುಸ್ತಕ ಇಂಗ್ಲೀಷ್ ಗೆ ಭಾಷಾಂತರವಾಗಿದ್ದು, ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯ ಪ್ರಕಟಿಸಿದೆ.
ಹನೂರರು ಶಾಸನ, ಹಳಗನ್ನಡ ಮತ್ತು ಜಾನಪದ ಅಧ್ಯಯನಗಳ ಕೊಂಡಿಯಂತಿದ್ದಾರೆ. ಅವರ ಇತ್ತೀಚಿನ ಕೃತಿ ಕಾಲುದಾರಿಯ ಕಥನಗಳು. ಇವರು 40 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo