Choose Language:

Kamalalayan

ಕಮಲಾಲಯನ್ ತಮಿಳು ಬರಹಗಾರ ಹಾಗೂ ಅನುವಾದಕ. ಇವರ ಮೂಲ ಹೆಸರು ವಿ. ಗುಣಶೇಖರನ್. 1970 ರಲ್ಲಿ ಮಕ್ಕಳ ಪತ್ರಿಕೆ ಮಧಪ್ಪು(Madhappu)ದಲ್ಲಿ ಅವರ ಮೊದಲ ಕತೆ ಪ್ರಕಟವಾಯಿತು. ಇವರ ಮೊದಲ ಕವನಸಂಕಲನ ’ಪ್ರವಿಶಾಲ್ಮರುಮ್(Pravishalmarum)’. ನಂತರದಲ್ಲಿ ಎರಡು ಸಣ್ಣ ಕಥೆಗಳ ಸಂಪುಟಗಳು, ನಾಲ್ಕು ಪ್ರಬಂಧಗಳ ಸಂಪುಟಗಳು, ನಾಲ್ಕು ಜೀವನಚರಿತ್ರೆಯ ಪುಸ್ತಕಗಳು, 11 ಅನುವಾದಿತ ಪುಸ್ತಕಗಳು ಮತ್ತು ಒಂದು ಪತ್ರಿಕೆ ಸಂಕಲನ ಸೇರಿದಂತೆ ವಿವಿಧ ಪ್ರಕಾಶನ ಸಂಸ್ಥೆಗಳ ಮೂಲಕ ಇದುವರೆಗೆ ಒಟ್ಟು ಇಪ್ಪತ್ತೆರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಅವರು ತಮಿಳುನಾಡು ಸರ್ಕಾರದ ಮಹಿಳಾ ಅಭಿವೃದ್ಧಿ ಕಾರ್ಯಕ್ರಮ, ರಾಜ್ಯ ಶಾಲಾ ಶಿಕ್ಷಣ ನಿಧಿ, ರಾಜ್ಯ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಗಾಗಿ ಕೈಪಿಡಿಗಳು ಮತ್ತು ತರಬೇತಿ ಪುಸ್ತಕಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವರಿಗೆ ‘ಮಾಲ್ಕಂ ಆದಿಶೇಷಯ್ಯ ಪ್ರಶಸ್ತಿ’ ಲಭಿಸಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo