ಕೆ.ವೈ.ಎನ್ ಎಂದೇ ಖ್ಯಾತರಾಗಿರುವ ‘ಕುಪ್ಪೂರು ಯಾಲಪ್ಪ ನಾರಾಯಣಸ್ವಾಮಿ’ಯವರು ಕನ್ನಡದ ಪ್ರಖ್ಯಾತ ನಾಟಕಕಾರರು, ಕವಿಗಳು, ವಿದ್ವಾಂಸರು, ವಿಮರ್ಶಕರು ಆಗಿದ್ದಾರೆ. ಸದ್ಯ ಸರ್ಕಾರಿ ಕಲಾ ಕಾಲೇಜು ಬೆಂಗಳೂರಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಕಳವು’, ‘ಅನಭಿಜ್ಞ ಶಾಕುಂತಲ’, ‘ಚಕ್ರರತ್ನ’, ‘ಹುಲಿಸೀರೆ’, ಮತ್ತು ‘ವಿನುರ ವೇಮ’, ಇವರ ಕನ್ನಡದ ಪ್ರಸಿದ್ದ ನಾಟಕಗಳು.
‘ಕುವೆಂಪು’ರವರ ‘ಶೂದ್ರತಪಸ್ವಿ’ ನಾಟಕವನ್ನು ತೆಲುಗು ಭಾಷೆಗೆ ಭಾಷಾಂತರಿಸಿದ್ದಾರೆ. ‘ಮಲೆಗಳಲ್ಲಿ ಮದುಮಗಳು’ ಬೃಹತ್ ಕಾದಂಬರಿಯನ್ನು ಒಂಬತ್ತು ಗಂಟೆಗಳ ‘ರಂಗ ರೂಪ’ಗೊಳಿಸಿದ್ದು, ಇದು ಭಾರತಿಯ ರಂಗಭೂಮಿಯಲ್ಲಿ ಹೊಸ ದಾಖಲೆಯನ್ನೆ ಸೃಷ್ಠಿಸಿದೆ.
‘ಕಳವು’ ಮತ್ತು ‘ಸೂರ್ಯಕಾಂತಿ’ ಎಂಬ ಕನ್ನಡ ಚಲನಚಿತ್ರಗಳಿಗೆ ಚಿತ್ರಕತೆ ಬರೆದಿರುವ ಅವರು ಕನ್ನಡ ಆಧುನಿಕ ರಂಗಭೂಮಿಯಲ್ಲಿ ಹೊಸ ಮೈಲುಗಲ್ಲು ಮೂಡಿಸಿದ ಇವರ ‘ಪಂಪ ಭಾರತ’ ನಾಟಕಕ್ಕೆ ‘ಸಾಹಿತ್ಯ ಅಕಾಡೆಮಿ’, ‘ನೆನೆವ ಪರಿ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.