ಮನೆ ಭಾಷೆ ತಮಿಳಾಗಿದ್ದರೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ತಮ್ಮದೇ ಅಸ್ತಿತ್ವ ಕಂಡುಕೊಂಡಿರುವ ಲೇಖಕ ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿದ್ದಾರೆ.
‘ಅರ್ಧನಾರೀಶ್ವರ’, ‘ಹುಣಿಸೆಮರದ ಕಥೆ’, ‘ಹಳ್ಳ ಬಂತು ಹಳ್ಳ’, ಗುಡಿಗಂಟೆ ಮತ್ತು ಇತರ ಕಥೆಗಳು, ಬಾಪೂ ಹೆಜ್ಜೆಗಳಲ್ಲಿ, ಮತ್ತೊಂದು ರಾತ್ರಿ, ಅತ್ತರ್, ಸರಸವಾಣಿಯ ಗಿಣಿಗಳು, ಕೋಶಿ’ಸ್ ಕವಿತೆಗಳು, ಹತ್ತು ತಮಿಳು ಕತೆಗಳು, ಗೂಳಿ, ಹೂ ಕೊಂಡ, ಪೊನಾಚ್ಚಿ, ಅವರ ಅತ್ಯಂತ ಗಮನಾರ್ಹ ಕೃತಿಗಳು.