Choose Language:

K N Ganeshaiah

ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಕಳೆದ 30 ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಸಂಶೋಧನೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಕೊಂಡಿವ ಅವರು
‘ಶಾಲಭಂಜಿಕೆ’ ಸಣ್ಣಕತೆ ಮೂಲಕ ಸೃಜನಶೀಲ ಬರವಣಿಯತ್ತ ಗಮನ ಹರಿಸಿದರು. ‘ಕನಕ ಮುಸುಕು’, ‘ಕರಿಸಿರಿಯಾನ’, ‘ಕಪಿಲಿಪಿಸಾರ’, ‘ಚಿತಾದಂತ’, ‘ಏಳು ರೊಟ್ಟಿಗಳು’, ‘ಮೂಕಧಾತು’, ‘ಶಿಲಾಕುಲ ವಲಸೆ’, ‘ಕಾನನ ಜನಾರ್ಧನ’, ‘ಜಲ-ಜಾಲ’, ‘ಹೊಕ್ಕಳ ಮೆದುಳು’, ‘ಶಾಲಭಂಜಿಕೆ’, ‘ಪದ್ಮಪಾಣಿ’, ‘ನೇಹಲ’, ‘ಸಿಗೀರಿಯಾ’, ‘ಕಲ್ಪವಸಿ’ ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ.
ಭಾರತ ಸರ್ಕಾರದ ಸಹಯೋಗದೊಂದಿಗೆ ‘ಜೀವಸಂಪದ’ ಹೆಸರಿನಲ್ಲಿ ಇವರು ರೂಪಿಸಿದ ಸಿ.ಡಿ.ಗಳು ಬಿಡುಗಡೆಯಾಗಿದ್ದು, ಅವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟೀಯ ಸಂಘ ಸಂಸ್ಥೆಗಳಿಂದ ಪುರಸ್ಕಾರಗಳು ಲಭಿಸಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo