Choose Language:

J Amoghavarsha

ಜೆ.ಎಸ್. ಅಮೋಘವರ್ಷ ಭಾರತೀಯ ಚಲನಚಿತ್ರ ನಿರ್ಮಾಪಕ ಮತ್ತು ವನ್ಯಜೀವಿ ಛಾಯಾಗ್ರಾಹಕ. ಅವರು ನ್ಯಾಷನಲ್ ಜಿಯಾಗ್ರಫಿಕ್ ಮತ್ತು ಬಿಬಿಸಿಯಂತಹ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು ಭಾರತೀಯ ವನ್ಯಜೀವಿ ರಾಷ್ಟ್ರಗೀತೆ, ಜಯಾ ಹೈ ಕನ್ನಡ ತಾಯೆ, ಹುಲಿ: ಹುಲಿಯನ್ನು ಹೇಗೆ ಉಳಿಸುವುದು?, ರಿವರ್ ಟರ್ನ್ಸ್ ಆಫ್ ಭದ್ರ, ಕಾಳಿ, ವೈಲ್ಡ್ ಕರ್ನಾಟಕದಂತಹ ಕಿರುಚಿತ್ರ, ಮ್ಯೂಸಿಕ್ ವಿಡಿಯೋಗಳನ್ನು ಹೊರತಂದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರನ್ನೊಳಗೊಂಡ ‘ಗಂಧದ ಗುಡಿ’ ಅಮೋಘವರ್ಷ ಅವರ ಬಹುಮುಖ್ಯ ಚಿತ್ರವಾಗಿದೆ.

ಅವರ ‘ವೈಲ್ಡ್ ಕರ್ನಾಟಕ’ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಇಂಪ್ಯಾಕ್ಟ್‌ಡಾಕ್ಸ್ ಅವಾರ್ಡ್ ಆಫ್ ಮೆರಿಟ್, ಮತ್ತು 2015 ರ ಆಸ್ಟ್ರೇಲಿಯಾ ಇಂಡಿಯಾ ಯೂತ್ ಡೈಲಾಗ್ ಅಲುಮ್ನಿ ಅನುದಾನದಂತಹ ಪ್ರಶಸ್ತಿಗಳನ್ನು ಗೆದ್ದಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo