Choose Language:

Fathima Raliya Hejamady

ಸೃಜನಶೀಲ ಕವಿ, ಕತೆಗಾರ್ತಿ ಫಾತಿಮಾ ರಲಿಯಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯಾಗಿರುವ ಪೆರ್ನೆಯವರು. ತಂದೆ ಅಬ್ದುಲ್ ರಶೀದ್ ಮತ್ತು ಆಯಿಶಾ. ಕಲ್ಲಡ್ಕ, ಪೆರ್ನೆ, ಉಪ್ಪಿನಂಗಡಿ, ಪುತ್ತೂರು ಗಳಲ್ಲಿ ವಿದ್ಯಾಭ್ಯಾಸ. ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿ ಎಂಬಿಎ ಪದವೀಧರೆ. 2020ರಲ್ಲಿ ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2021ರಲ್ಲಿ ಮೊಗವೀರ ಸಾಹಿತ್ಯ ಪ್ರಶಸ್ತಿ, 2022ರಲ್ಲಿ ಸಮಾಜಮುಖಿ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಅಪ್ರಕಟಿತ ಕವನ ಸಂಕಲನಕ್ಕಾಗಿ ವಿದ್ಯಾಧರ ಪ್ರತಿಷ್ಠಾನ ಕೊಡಮಾಡುವ ದ‌‌.ರಾ. ಬೇಂದ್ರೆ ಸಾಹಿತ್ಯ ಪ್ರಶಸ್ತಿ ದೊರಕಿದೆ.
ಇವರ ‘ಕಡಲು ನೋಡಲು ಹೋದವಳು’ ಕೃತಿಗೆ ಲಂಕೇಶ್ ಪ್ರಶಸ್ತಿ ಮತ್ತು ಅವ್ವ ಪ್ರಶಸ್ತಿ 2023ರಲ್ಲಿ ದೊರಕಿದೆ. 2023ರಲ್ಲಿ ಸಂಕಥನ ‘ಒಡೆಯಲಾರದ ಒಡಪು’ ಕಥಾಸಂಕಲನ ಪ್ರಕಟಿಸಿದೆ.
ಕಡಲು ನೋಡಲು ಹೋದವಳು, ಒಡೆಯಲಾರದ ಒಡಪು, ಅವಳ ಕಾಲು ಸೋಲದಿರಲಿ ಅವರ ಪ್ರಕಟಿತ ಕೃತಿಗಳು

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo