Choose Language:

Champa Shetty

ಮಹಿಳಾ ಪ್ರಧಾನ ಚಿತ್ರಗಳಿಂದ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಚಂಪಾ ಶೆಟ್ಟಿ ನಟಿ, ನಿರ್ಮಾಪಕಿ, ಚಿತ್ರಕಥೆಗಾರ್ತಿ ಮತ್ತು ಧ್ವನಿ ಕಲಾವಿದೆ. ವಾಯ್ಸ್ ಓವರ್/ಡಬ್ಬಿಂಗ್ ಕಲಾವಿದರಾಗಿ ಚಿತ್ರರಂಗದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಅವರು  ‘ಕುರುನಾಡು’ ಚಲನಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ಅವರು 2007-08 ನೇ ಸಾಲಿನ ಅತ್ಯುತ್ತಮ ಡಬ್ಬಿಂಗ್ ಕಲಾವಿದೆ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಅವರು ಉದಯ ನ್ಯೂಸ್ ಸಂಸ್ಥೆಯಲ್ಲಿ ಪ್ರೈಮ್ ಟೈಮ್ ನ್ಯೂಸ್ ರೀಡರ್ ಆಗಿ ಕೆಲಸ ಮಾಡಿದ್ದರು. ನಂತರ ನಾಗತೀಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಕಾವೇರಿ’, ಬಿ. ಸುರೇಶ ನಿರ್ದೇಶನದ ‘ನಾಕುತಂತಿ’, ಯೋಗರಾಜ್ ಭಟ್ ನಿರ್ದೇಶನದ ‘ಪರಮ ಪದ’ ಮತ್ತು ಟಿ.ಎನ್. ಸೀತಾರಾಮ್ ನಿರ್ದೇಶನದ ‘ಮುಕ್ತ ಮುಕ್ತ’ ದೂರದರ್ಶನ ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ.

‘ಬೆಳಕಿನೆಡೆಗೆ’ ಚಿತ್ರದಲ್ಲಿ ನಾಯಕನ ತಾಯಿಯ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಂಪಾ ಶೆಟ್ಟಿ ಅನನ್ಯಾ ಕಾಸರವಳ್ಳಿ ನಿರ್ದೇಶನದ ‘ಹರಿಕಥಾ ಪ್ರಸಂಗ/ಕ್ರಾನಿಕಲ್ಸ್ ಆಫ್ ಹರಿ’ ಚಿತ್ರದಲ್ಲಿ ಇದೇ ರೀತಿಯ ಪಾತ್ರದಲ್ಲಿ ನಟಿಸಿದರು.

2018ರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮಹಿಳಾ ಕೇಂದ್ರಿತ ಚಲನಚಿತ್ರ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು. ಅವರ ಎರಡನೇ ನಿರ್ದೇಶನದ ಚಿತ್ರ ‘ಕೋಳಿ ಎಸ್ರು’  2023ರ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಭಾರತೀಯ ಚಲನಚಿತ್ರ ಸ್ಪರ್ಧೆಯ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದೆ.

ರಂಗಭೂಮಿಯಲ್ಲಿ ಸಹ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ‘ಗಾಂಧಿ ಬಂದ’ ಮತ್ತು ‘ಅಕ್ಕು’ ನಾಟಕಗಳನ್ನು ನಿರ್ಮಾಣ ಮಾಡಿದ್ದಾರೆ.

 

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo