ಸಿ. ಚಂದ್ರಶೇಖರ್ ನಿವೃತ್ತ ಐಪಿಎಸ್ ಅಧಿಕಾರಿ, ಸುಮಾರು 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕನ್ನಡ ಇಂಗ್ಲಿಷ್ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ಪ್ರವಾಸ, ಶಾಸ್ತ್ರೀಯ ಸಂಗೀತ ಮತ್ತು ಲಲಿತಕಲೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೊತೆಗೆ 2006 ರಲ್ಲಿ ಮಹಾಮಸ್ತಕಾಭಿಷೇಕದ ಜಾಗತಿಕ ಪ್ರಸಾರವನ್ನು ಶ್ರವಣ ಬೆಳಗೊಳದಲ್ಲಿ ಅತ್ಯಾಧುನಿಕ ಮಾಧ್ಯಮಗಳೊಂದಿಗೆ ಕಾರ್ಯ ನಿರ್ವಹಿಸಿದ್ದರು. ಫ್ರಾನ್ಸ್ ನ ಲಿಯಾನ್ಸ್ ನ (ಇಂಟರ್ ಪೋಲ್ ನ ಪ್ರಧಾನ ಕಛೇರಿ) ಪೊಲೀಸ್ ಕಾಲೇಜುಗಳ ಮುಖ್ಯಸ್ಥರ 13ನೇ ವಿಚಾರ ಸಂಕಿರಣದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರ ಪ್ರಮುಖ ಇಂಗ್ಲಿಷ್ ಕೃತಿ ‘Kaveri Dispute – A historical perspective’ 2023ರಲ್ಲಿ ಪ್ರಕಟಗೊಂಡಿದೆ.
ಅವರ ಸಾರ್ವಜನಿಕ ಸೇವೆಗಾಗಿ 1993 ರಲ್ಲಿ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ವೃತ್ತಿಯಲ್ಲಿ ಅವರು ಮಾಡಿದ ನಿಷ್ಠಾವಂತ ಸೇವೆಗಾಗಿ 2001 ರಾಷ್ಟ್ರಪತಿ ಪದಕ ದೊರೆತಿದೆ.