Choose Language:

Benyamin

’ಬೆನ್ಯಮಿನ್’ ಎಂಬ ಕಾವ್ಯನಾಮದಿಂದ ಪ್ರಖ್ಯಾತಿ ಪಡೆದಿರುವ ಮಲಯಾಳಂ ಲೇಖಕ ಬೆನ್ನಿ ಡೇನಿಯಲ್ ಖ್ಯಾತ ಕಥೆಗಾರ, ಕಾದಂಬರಿಕಾರ ಮತ್ತು ಸ್ಕ್ರೀನ್ ಪ್ಲೇ ಬರಹಗಾರ. ಅವರ ’ಆಡುಜೀವಿತಂ’ ಸುಮಾರು ಇನ್ನೂರಕ್ಕಿಂತ ಹೆಚ್ಚು ಬಾರಿ ಮರು ಮುದ್ರಣಗೊಂಡಿದೆ. ಇತ್ತೀಚೆಗೆ ’ಗೋಟ್ಲೈಫ್’ ಎಂಬ ಹೆಸರಿನ ಸಿನಿಮಾ ರೂಪದಲ್ಲಿ ಕೂಡ ತೆರೆ ಕಂಡಿದೆ. ’ಮಂಜವೆಯಿಲ್ ಮರಣಂಗಲ್’, ಮುಲ್ಲಾಪ್ಪೂ ನಿರ್‍ಮುಲ್ಲಾ ಪಾಕಲುಕ್ಕಲ್, ಥಾರಕನ್ಸ್ ಗ್ರಂಧಾವರಿ ಅವರ ಇನ್ನಿತರ ಪ್ರಮುಖ ಕಾದಂಬರಿಗಳು. ಬೆನ್ಯಮಿನ್ ಅವರಿಗೆ ’ಅಬು ಧಾಬಿ ಸಕ್ತಿ ಪ್ರಶಸ್ತಿ’, ’ಕೇರಳ ಸಾಹಿತ್ಯ ಅಕಾಡೆಮಿ ಪುರಸ್ಕಾರ’, ಜೆಸಿಬಿ ಪ್ರೈಜ್, ಕ್ರಾಸ್ವರ್ಡ್ ಬುಕ್ ಅವಾರ್ಡ್ ಮತ್ತು ವಯಲಾರ್ ಪ್ರಶಸ್ತಿ ದೊರಕಿದೆ. ಒಬ್ಬ ಸ್ಕ್ರೀನ್ ಪ್ಲೇ ರೈಟರ್ ಆಗಿ ಕೂಡ ಅವರ ಹೆಸರು ಮಾಡಿದ್ದಾರೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo