ಭಾಷಾ ತಜ್ಞ, ಲೇಖಕ ಬಸವರಾಜ ಕೋಡಗುಂಟಿ ಅವರು ಪ್ರಸ್ತುತ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಗುಲ್ಬರ್ಗದಲ್ಲಿ ಕನ್ನಡ ಭಾಷಾ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ವಿಜ್ಞಾನದಲ್ಲಿ ಆಸಕ್ತಿ ಇರುವ ಇವರು ಕನ್ನಡ ಮಾತಿನ ಇತಿಹಾಸ, ದ್ರಾವಿಡ ಮಾತಿನ ಮನೆತನ, ವಿಬಕ್ತಿ ಮೊದಲಾದ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಇವರ ಪ್ರಮುಖ ಕೃತಿಗಳೆಂದರೆ ‘ಕನ್ನಡ ವಿಬಕ್ತಿ ರೂಪಗಳ ಅಯ್ತಿಹಾಸಿಕ ಬೆಳವಣಿಗೆ’, ‘ಮಸ್ಕಿ ಕನ್ನಡದಾಗ ವಿಬಕ್ತಿ ರೂಪಗಳು’, ‘ಮಾತೆಂಬುದು’, ‘ಬಾಶಿಕ ಕರ್ನಾಟಕ’. ಇತರ ಕೃತಿಗಳೆಂದರೆ ‘ಭಾಷಾ ವಿಶ್ಲೇಷಣೆ’, ‘ಊರು’, ‘ಹೈದರಾಬಾದ್ ಕರ್ನಾಟಕ’, ‘ಕರ್ನಾಟಕದ ಮಾತುಗಳು’, ‘ದರಗಾ’, ‘ಹೈದರಾಬಾದ್ ಕರ್ನಾಟಕ ಸಾಲು ಸಂಪುಟಗಳು-6’ ಮುಂತಾದವು.