Choose Language:

B Jeyamohan

ಬಿ. ಜಯಮೋಹನ್ ಅವರು ತಮಿಳು ಮತ್ತು ಮಲಯಾಳಂನ ಪ್ರಸಿದ್ಧ ಬರಹಗಾರರಲ್ಲಿ ಒಬ್ಬರು. ಈ ಎರಡು ಭಾಷೆಗಳಲ್ಲಿ ಹಿಡಿತ ಇದ್ದರೂ ಬಹುತೇಕ ಕೃತಿಗಳು ತಮಿಳಿನಲ್ಲಿ ಪ್ರಕಟಗೊಂಡಿವೆ.

ರಬ್ಬರ್ (Rubber), ಕಾಡು(Kaadu), ವಿಷ್ಣುಪುರಂ(Vishnupuram), ಈಝಂ ಉಲಗಂ( Eazhaam Ulagam), ಇರವು ಮತ್ತು ಉಲೊಗಂ(Iravu and Ulogam) ಅವರ ಪ್ರಸಿದ್ಧ ಕಾದಂಬರಿಗಳು. ಅವರು 2005 ರಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಆಧುನಿಕ ಮಹಾಕಾವ್ಯ ಕೊಟ್ರವೈ (Kotravai )ಅನ್ನು ಬರೆದಿದ್ದಾರೆ.

ಜಯಮೋಹನ್ ಅವರು ಕಾದಂಬರಿಕಾರರಾಗಿ ಮಾತ್ರವಲ್ಲದೆ ಸಣ್ಣ-ಕಥೆಗಾರ ಮತ್ತು ವಿಮರ್ಶಕರಾಗಿಯೂ ಪ್ರಸಿದ್ಧರು. ಅವರಿಗೆ ಅಕಿಲನ್ ಸ್ಮಾರಕ ಪ್ರಶಸ್ತಿ(Akilan Memorial Prize), ಕಣ್ಣಂದಾಸನ್ ಪ್ರಶಸ್ತಿ(Kannandasan Award), ಕೋವೈ ಕಣ್ಣಂದಾಸನ್ ಕಜ್ಗಮ್‌ನಿಂದ ಕೊಡಿಸ್ಸಿಯಾ ಪುಸ್ತಕೋತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ( Kovai Kannandasan Kazhgam to Lifetime Achievement Award at the Codissia Book Festival) ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ. ನ್ಯಾಷನಲ್ ಲೈಬ್ರರಿ, ಸಿಂಗಾಪುರವು 2013 ರಲ್ಲಿ ಅವರಿಗೆ ‘ವರ್ಷದ ತಮಿಳು ಲೇಖಕ’ ಪ್ರಶಸ್ತಿಯನ್ನು ನೀಡಿದೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo