Choose Language:

Anupama Prasad

ಕನ್ನಡದ ಗಮನಾರ್ಹ ಬರಹಗಾರ್ತಿ ಅನುಪಮಾ ಪ್ರಸಾದ್ ಉಜಿರೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದು, ಕಂಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ (Bca)ಪೂರೈಸಿ ಆನಂತರದಲ್ಲಿ ಕನ್ನಡದಲ್ಲಿ ಎಮ್.ಎ. ಪದವಿ ಪಡೆದಿದ್ದಾರೆ.
‘ಚೇತನ’, ‘ಕರವೀರದ ಗಿಡ’, ‘ದೂರತೀರ’, ‘ಜೋಗತಿ ಜೋಳಿಗೆ’, ‘ಪಕ್ಕಿಹಳ್ಳದ ಹಾದಿಗುಂಟ’, ‘ಚೋದ್ಯ’ ಅವರ ಪ್ರಕಟಿತ ಕಥಾಸಂಕಲನಗಳು. ‘ಅರ್ಧ ಕಥಾನಕ’-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ಅವರ ಮಗ ತೇಜಸ್ವಿ ವ್ಯಾಸರ ನುಡಿಗಳ ಕಥನ ನಿರೂಪಣೆ, ಜೊತೆಗೆ ‘ಕೆನ್ನೀರು’ ಎಂಬ ಹೆಸರಿನ ರೇಡಿಯೋ ನಾಟಕ ಮತ್ತು ‘ಮನಸ್ಸು ಮಾಯೆಯ ಹಿಂದೆ’ ಎಂಬ ನಾಟಕಗಳನ್ನು ರಚಿಸಿದ್ದಾರೆ.
ಇವರ ‘ಕರವೀರದ ಗಿಡ’ ಕಥಾಸಂಕಲನದ ಹಸ್ತಪ್ರತಿಗೆ 2009ನೇ ಸಾಲಿನ (ರಂಗಕರ್ಮಿ ಸದಾನಂದ ಸುವರ್ಣ) ಮುಂಬೆಳಕು ಸಾಹಿತ್ಯ ಪ್ರಶಸ್ತಿ, 2011 ರಲ್ಲಿ ಬೇಂದ್ರೆ ಪುಸ್ತಕ ಬಹುಮಾನ, ಹಾಗೂ ಇದೇ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ಲಭಿಸಿದೆ. ದೂರತೀರ ಕಥಾಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ತ್ರಿವೇಣಿ ಕಥಾ ಪ್ರಶಸ್ತಿ ನೀಡಿ ಗೌರವಿಸಿದೆ, ಜೊತೆಗೆ ಇದೇ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ,”ವಸುದೇವ ಭೂಪಾಲಂ” ದತ್ತಿ ಕಥಾ ಪ್ರಶಸ್ತಿ, ‘ದೂರತೀರ’ ಕೃತಿಗೆ ‘ಬೆಸಗರ ಹಳ್ಳಿ ರಾಮಣ್ಣ ಕಥಾ ಪುರಸ್ಕಾರ’, ಮಾಸ್ತಿ ಕಥಾ ಪುರಸ್ಕಾರ, ‘ಜೋಗತಿ ಜೋಳಿಗೆ’ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕರಾವಳಿ ಲೇಖಕಿಯರ ಸಂಘದ ಸಾರಾ ಅಬೂಬಕರ್ ದತ್ತಿ ಕಥಾ ಪುರಸ್ಕಾರ, ‘ಪಕ್ಕಿ ಹಳ್ಳದ ಹಾದಿಗುಂಟ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಚದುರಂಗ ದತ್ತಿ ಬಹುಮಾನ, ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ಶಾಂತಾರಾಮ ಸಾಹಿತ್ಯ ಪ್ರಶಸ್ತಿ, ‘ಚೋದ್ಯ’ ಕೃತಿಗೆ 2023ನೇ ಸಂಗಂ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ದೊರೆತಿವೆ.
ಅನುಪಮಾ ಅವರ ಬರಹಗಳು ದಮನಿಸಲ್ಪಟ್ಟ ಮನಸುಗಳ ಆಕ್ರಂದನಕ್ಕೆ, ಶೋಷಿತರ ಒಳ ಬಂಡಾಯಕ್ಕೆ ದನಿಯಾಗಿವೆ.

Subscribe Newsletter

©2024 ಬುಕ್ ಬ್ರಹ್ಮ ಪ್ರೈವೇಟ್ ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ

verbinden logo